ಅರಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೇಖಮಲೆ ಒಕ್ಕೂಟ ಇದರ ತ್ರೈಮಾಸಿಕ ಸಭೆ ಜು 7 ರಂದು ಒಕ್ಕೂಟದ ಅಧ್ಯಕ್ಷರಾದ ಗೋವಿಂದ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಸ.ಹಿ.ಪ್ರಾಥಮಿಕ ಶಾಲೆ ಅರಿಯಡ್ಕದಲ್ಲಿ ನಡೆಯಿತು.

ಈ ಸಭೆಯಲ್ಲಿ ಕುಂಬ್ರ ಕಾಯಕಲ್ಪ ಆರೋಗ್ಯ ಧಾಮ ಇದರ ಇ.ಎ ಸ್ಪೇಷಲಿಷ್ಟ್ ಲಕ್ಷ್ಮಣ ಕೆ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ನಮ್ಮಲ್ಲಿ ಬೆನ್ನು,ಕತ್ತು,ಮಂಡಿ, ಮೈಕೈನೋವು, ಅಸ್ತಮಾ, ಕಿವಿ ಮೂಗು ಗಂಟಲು ನೋವು,ಮೂಲವ್ಯಾದಿ,ಬಿ.ಪಿ, ಶುಗರ್, ಸ್ಟ್ರೋಕ್, ಕೊಲೆಸ್ಟ್ರಾಲ್ , ತಲೆ ನೋವು, ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆ ಇನ್ನಿತರ ಅನೇಕ ಶರೀರಕ್ಕೆ ಬರುವ ವಿವಿಧ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಹಿತಿದಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕುಂಬ್ರ ವಲಯಾಧ್ಯಕ್ಷ ಮಾಧವ ರೈ ಕುಂಬ್ರ, ಮೇಲ್ವಿಚಾರಕರಾದ ಜಯಂತಿ, ಒಕ್ಕೂಟದ ಜತೆ ಕಾರ್ಯದರ್ಶಿ ಚಿತ್ರಾಕ್ಷಿ, ಉಪಾಧ್ಯಕ್ಷ ಬಾಲಚಂದ್ರ ರೈ, ಮುಂತಾದವರು ಉಪಸ್ಥಿತರಿದ್ದರು.ದಾಮೋದರ ರೈ ಪನೆಕ್ಕಳ ಸ್ವಾಗತಿಸಿ ,ಶೇಖರ ಜಾರತ್ತಾರು ವಂದಿಸಿದರು ಸೇವಾ ಪ್ರತಿನಿಧಿ ಸವಿತಾ ಎಸ್ ಕಾರ್ಯಕ್ರಮದ ನಿರೂಪಿಸಿದರು.