ಮಂಗಳೂರು -ಸುಬ್ರಹ್ಮಣ್ಯ ಮಧ್ಯೆ ಸಂಜೆ ಮತ್ತು ಬೆಳಿಗ್ಗೆ ಪ್ಯಾಸೆಂಜರ್ ರೈಲು ಸಂಚರಿಸುವಂತೆ ಸುಳ್ಯ ಶಾಸಕರಿಂದ ಸಂಸದರಿಗೆ ಮನವಿ

0

ಕಾಣಿಯೂರು: ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಂಜೆ ಮತ್ತು ಬೆಳಿಗ್ಗೆ ಪ್ಯಾಸೆಂಜರ್ ರೈಲು ಸಂಚರಿಸಲು ಕ್ರಮಕೈಗೊಳ್ಳಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಅವರು ದ. ಕ ಸಂಸದರಾದ ಕ್ಯಾ| ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಲಳಂಬೆ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here