ಪುತ್ತೂರು: ತಾ|ಮೊಗೇರ ಸಂಘದಿಂದ ಪ್ರತಿಭಾವಂತ ಮೊಗೇರ ವಿದ್ಯಾರ್ಥಿಗಳಿಗೆ ಸನ್ಮಾನ, ಅಭಿನಂದನೆ

0

ಪುತ್ತೂರು: ಮೊಗೇರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮೊಗೇರ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜು.7 ರಂದು ಮಿನಿ ವಿಧಾನಸೌಧದ ಹಿಂಬಾಗದಲ್ಲಿನ ಸೈನಿಕ ಭವನದಲ್ಲಿ ಜರಗಿತು.

ಪುತ್ತೂರು ಮೊಗೇರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಅಂಗಾರ ಪಿ.ಹಾರಾಡಿರವರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಂಘವು ಕಳೆದ ಐವತ್ತು ವರ್ಷಗಳಿಂದ ಸಮುದಾಯದ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲೂ ಸಮುದಾಯದ ಅಭಿವೃದ್ಧಿಯತ್ತ ಸಂಘವು ಮುನ್ನೆಡೆಯಲಿ, ತನ್ನ ಸಹಕಾರ, ಬೆಂಬಲ ಎಂದಿಗೂ ಇದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಸುರೇಖಾ ಎಚ್. ಮಾತನಾಡಿ, ಸಮುದಾಯದ ಪ್ರತಿಯೋರ್ವ ವಿದ್ಯಾರ್ಥಿಯೂ ಶಿಕ್ಷಣ ಪಡೆಯುವಂತಾದಾಗ ಉದ್ಯೋಗದ ಭರವಸೆ ಹೊಂದುವಂತಾಗುತ್ತದೆ ಎಂದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಪೊಡಿಯಾ ಮಾತನಾಡಿ, ತಮ್ಮ ಜೀವನದಲ್ಲಿ ಶಿಕ್ಷಣ ಹಾಗೂ ದೈಹಿಕ ಸಾಮರ್ಥ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ರಾಜ್ಯ ಮೊಗೇರ ಸಂಘದ ಮಾಜಿ ಅಧ್ಯಕ್ಷ ಸುಂದರ ಮೇರ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ನಡೆಯುತ್ತಿದ್ದು ಅದರ ವಿರುದ್ಧ ಹೋರಾಟ ಮಾಡುವುದಾಗಿ ಹಾಗೂ ಸರಕಾರಕ್ಕೆ ಮನವಿ ನೀಡುವುದು ಎಂದು ಹೇಳಿದರು. ತಾಲೂಕು ಮೊಗೇರ ಸಂಘದ ಗೌರವಾಧ್ಯಕ್ಷ ಸದಾನಂದ ಟಿ., ಮೊಗೇರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಧ್ಯಕ್ಷ ವಿನಯರಾಜ್ ರವರು ಭಾಗವಹಿಸಿದರು.

ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸುಂದರ ಕೇಪುಳು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಕೆಮ್ಮಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಚಾರ ಸಮಿತಿ ಸದಸ್ಯೆ ಚಿತ್ರಾಕ್ಷಿ ತೆಗ್ಗು ಸ್ವಾಗತಿಸಿದರು. ಕೋಶಾಧಿಕಾರಿ ರಾಘವ ಕೆ.ಖಂಡಿಗ, ಸಹ ಕೋಶಾಧಿಕಾರಿ ಶರತ್ ಕೆ.ವಿ ಕಬಕ, ಉಪಾಧ್ಯಕ್ಷರಾದ ವಿಜಯ ಕುಮಾರ್ ಕೆ, ವಿಜಯಲಕ್ಷ್ಮೀ, ಜೊತೆ ಕಾರ್ಯದರ್ಶಿ ದಿನೇಶ್ ಬಿ, ದಿನೇಶ್ ಕಜೆ, ಸಂಘಟನಾ ಕಾರ್ಯದರ್ಶಿ ಲೋಕೇಶ್ ಎಂ.ಎಚ್, ಬಾಬು ನೆಕ್ಕರೆ, ಚಂದ್ರ ಬೇರಿಕೆ, ಗೌರವ ಸಲಹೆಗಾರರಾದ ಮಣಿ ಬಿ, ಬಾಬು ಕೂರ್ನಡ್ಕ, ಶ್ರೀಧರ ಕೆ, ನಾರಾಯಣ ಕೆ, ಚೋಮ ಬಿರವರು ಸಹಕರಿಸಿದರು.

ಸನ್ಮಾನ/ಅಭಿನಂದನೆ..
ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕು.ಸೌಜನ್ಯ ಬಿ.ಎಂ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪಿಯುಸಿ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಮತ್ತು ಪಿಯುಸಿ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here