ಪುತ್ತೂರು: ಕಟ್ಟತ್ತಾರಿನ ಅನಿವಾಸಿಗರ ಸಂಘಟನೆ ಸಮಸ್ತ ಗಲ್ಫ್ ಬ್ರದರ‍್ಸ್ ಇದರ 6ನೇ ವಾರ್ಷಿಕ ಮಹಾಸಭೆ ಶರೀಫ್ ಮುಗುಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಜಿ ಉಮ್ಮರ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಮೂಸಾ ಬದ್ರಿಯಾ ಉದ್ಘಾಟಿಸಿದರು. ನವಾಝ್ ದುಬೈ ಸ್ವಾಗತಿಸಿ ಪ್ರಸ್ತಾವನೆಗೈದರು. ಖಾದರ್ ನಿಡ್ಯಾಣ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷತೆ ವಹಿಸಿ ಶರೀಫ್ ಮುಗುಳಿ ಸೌದಿ ಅರೇಬಿಯಾ ಮಾತನಾಡಿದರು.
ಚುನಾವಣಾಧಿಕಾರಿಯಾಗಿದ್ದ ಶರೀಫ್ ಕೆ.ಎ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಸ್ತ ಗಲ್ಫ್ ಬ್ರದರ‍್ಸ್ ಕಟ್ಟತ್ತಾರು ಸಮಿತಿಯ 2024-2025ನೇ ಸಾಲಿನ ಗೌರವಾಧ್ಯಕ್ಷರಾಗಿ ಉಮ್ಮರ್ ಸಿ.ಬಿ ಸೌದಿ ಅರೇಬಿಯಾ, ಅಧ್ಯಕ್ಷರಾಗಿ ಹನೀಫ್ ಬದ್ರಿಯಾ ದುಬೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಖಾದರ್ ಎನ್ ದುಬೈ ಅವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಮನ್ಸೂರ್ ಕತ್ತರ್, ಉಪಾಧ್ಯಕ್ಷರಾಗಿ ಹಾಜಿ ಹಾಸಿರ್ ನಂಜೆ ಒಮಾನ್, ಸಂಘಟನಾ ಕಾರ್ಯದರ್ಶಿಯಾಗಿ ರೌಫ್ ಬಿ.ಎಸ್, ಜೊತೆ ಕಾರ್ಯದರ್ಶಿಯಾಗಿ ಇಕ್ಬಾಲ್ ಕೆ.ಎಸ್ ಅಬುದಾಬಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶರೀಫ್ ಮುಗುಳಿ ಸೌದಿ ಅರೇಬಿಯಾ, ಶರೀಫ್ ಕೆ.ಎ ದುಬೈ, ಮೂಸಾ ಬದ್ರಿಯಾ, ಬಶೀರ್ ನಂಜೆ, ಝುಬೈರ್ ಹಾಜಿ ಒಮಾನ್, ನವಾಝ್ ದುಬೈ, ಫಕ್ರುದ್ದೀನ್ ಕತ್ತರ್ ಆಯ್ಕೆಯಾದರು. ರೌಫ್ ಬಿ.ಎಸ್ ಶಾರ್ಜಾ ವಂದಿಸಿದರು.