ಪುಣಚ: ಅಜ್ಜಿನಡ್ಕದಲ್ಲಿ ತೆಂಗಿನಮರ ಬಿದ್ದು ಮನೆಗೆ ಹಾನಿ- ಅಪಾರ ನಷ್ಟ

0

ಪುಣಚ: ಭಾರೀ ಮಳೆ ಗಾಳಿಗೆ ತೆಂಗಿನ ಮರವೊಂದು ಮನೆಗೆ ಬಿದ್ದ ಪರಿಣಾಮ ಮನೆಗೆ ಹಾನಿಯಾದ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕದಲ್ಲಿ ಜು.14ರ ರಾತ್ರಿ ನಡೆದಿದೆ.


ಪುಣಚ ಗ್ರಾಮದ ಅಜ್ಜಿನಡ್ಕ ಸುಬ್ಬು ಪಾಟಾಳಿಯವರ ಮನೆಯ ಸಮೀಪದ ತೆಂಗಿನಮರವೊಂದು ಅವರ ಮನೆಯ ಮಧ್ಯಭಾಗಕ್ಕೆ ಬಿದ್ದ ಪರಿಣಾಮ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಮನೆ ಮಾಲಕ ಸುಬ್ಬು ಪಾಟಾಳಿ ಹಾಗೂ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ನೀರ್ಕಜೆ ಕಿರಣ್ ಬಳಗ ಹಾಗೂ ಸ್ಥಳೀಯರು ಸೇರಿ ತೆಂಗಿನಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಹಕರಿಸಿದರು.
ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಅಭಿವೃದ್ಧಿ ಅಧಿಕಾರ ರವಿ ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here