ಬಡಗನ್ನೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ(ರಿ) ಮಂಗಳೂರು, ಬ್ಯಾಂಕ್ ಆಫ್ ಬರೋಡ ಈಶ್ವರಮಂಗಲ, ವಿಜಯ ಗ್ರಾಮ ಸಮಿತಿ ಸುಳ್ಯಪದವು ಇದರ ವತಿಯಿಂದ ಬಡಗನ್ನೂರು ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಭತ್ತದ ನಾಟಿ ಮಾಹಿತಿ ಕಾರ್ಯಗಾರ ವಿಶ್ವನಾಥ ಪೂಜಾರಿ ಪೂಜಾರಿ ಮೂಲೆ ರವರ ಗದ್ದೆಯಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಅರಿಯಡ್ಕ ಗ್ರಾ. ಪಂ ಸದಸ್ಯ ಹಾಗೂ ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಕೆರೆಮಾರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಯಾಂತ್ರೀಕರಣ ಪದ್ಧತಿಯಲ್ಲಿ ಕೃಷಿ ಮಾಡಿ ಸಮಯ ಹಾಗೂ ಕಡಿಮೆ ವೆಚ್ಚದ ಕೆಲಸ ಮಾಡಿ ಉಳಿತಾಯ ಮಾಡಬಹುದು ಮತ್ತು ಕೃಷಿ ಚಟುವಟಿಕೆ, ಸಾವಯವ ಗೊಬ್ಬರದ ಬಳಕೆಯಿಂದ ನಮ್ಮ ಆರೋಗ್ಯವು ಕೂಡ ವೃದ್ಧಿಸುತ್ತದೆ ಎಂದರು. ನಂತರ ಮಕ್ಕಳಿಗೆ ಭತ್ತ ನಾಟಿಯ ಪ್ರಾತ್ಯಕ್ಷಿಕೆಯನ್ನು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ನಾಟಿ ವೈದ್ಯ ವಿಶ್ವನಾಥ ಪೂಜಾರಿಯವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಜಯ ಗ್ರಾಮ ಸಮಿತಿ ಇದರ ಅಧ್ಯಕ್ಷ ಗೋವಿಂದ ಭಟ್ ಪೈರುಪುಣಿ, ನಿವೃತ್ತ ಮುಖ್ಯ ಗುರು ನಾರಾಯಣ ನಾಯ್ಕ, ಶತಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ರೈ ಕಟ್ಟಾವು, ವಿಜಯ ಗ್ರಾಮ ಸಮಿತಿ ಸದಸ್ಯರಾದ ಮಾಧವ ನಾಯಕ್, ಪ್ರಣಾಮ್ ರೈ, ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಎಸ್ ಡಿ ಎಂ ಸಿ ಅಧ್ಯಕ್ಷ ಬಾಬು ಮೂಲ್ಯ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಸದಸ್ಯರಾದ ಬಾಬು ಬಿ, ಸುಬ್ರಾಯ ನಾಯಕ್, ಸುಲೋಚನಾ ಡಿ, ನಳಿನಿ , ವಿಜಯ, ಲತಾಕುಮಾರಿ, ವಿದ್ಯಾಶ್ರೀ ಎಸ್ ರೈ, ಶ್ರೀಜಾ ಹರೀಶ್, ರಜನಿ ಹಾಗೂ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.
ಮಣ್ಣಿನೊಂದಿಗೆ ಆಟ ಬೇಸಾಯದ ಪಾಠ:-
ತುಂತುರು ಮಳೆ ನಡುವೆ ಕೆಸರಿನ ಗದ್ದೆಯಲ್ಲಿ ಆಟವಾಡುವುದೇ ಖುಷಿ. ಮಕ್ಕಳ ಈ ಸಂಭ್ರಮಕ್ಕೆ ವಿಶ್ವನಾಥ ಪೂಜಾರಿ ಪೂಜಾರಿ ಮೂಲೆಯವರ ಗದ್ದೆ ವೇದಿಕೆಯಾಗಿದೆ.ಮಕ್ಕಳಿಗೆ ಅನ್ನದ ಶ್ರಮ ತಿಳಿಸುವ ಜೊತೆಗೆ ಮಣ್ಣಿನ ಕಾಯಕದ ಪರಿಚಯವೂ ಮಾಡಲಾಯಿತು. ಕಾರ್ಯಕ್ರಮದ ನಂತರ ಮಕ್ಕಳು ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಯನ್ನು ಆಡಿದರು. ಕೊನೆಯಲ್ಲಿ ಪೋಷಕರಿಗೆ ಭತ್ತದ ಸಸಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.