ಪುತ್ತೂರು : ಭಾರತ ಸರ್ಕಾರದ ಕಾಪೋರೇಟ್ ವ್ಯವಹಾರಗಳ ಸಚಿವಾಲಯ ಇದರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ,ಹೆಸರಾಂತ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ.
ಇದರ 7ನೇ ಶಾಖೆಯೂ ಪುತ್ತೂರಿನಲ್ಲಿ ಜುಲೈ 15 ರಂದು ಲೋಕಾರ್ಪಣೆಗೊಂಡಿತು.
ಬೊಳುವಾರು ಇನ್ ಲ್ಯಾಂಡ್ ಮಯೂರ ಕಮರ್ಷಿಯಲ್ ಸಂಕೀರ್ಣ ಇದರ ಮೂರನೆಯ ಮಹಡಿಯಲ್ಲಿ ಕಾರ್ಯನಿರ್ವಹಿಸಲಿರುವ ನೂತನ ಶಾಖೆಯನ್ನು ಅತಿಥಿಗಳು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ , ಹಾರೈಸಿದರು. ಇದಕ್ಕೂ ಮೊದಲು ಅರ್ಚಕ ಶ್ರೀ ಕೃಷ್ಣ ಉಪಾಧ್ಯಾಯ ಬಳಗ ಧಾರ್ಮಿಕ ಕಾರ್ಯವನ್ನು ನೆರವೇರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ದ.ಕ.ಮ್ಯೂಚುವಲ್ ಬೆನಿಫಿಟ್ ನಿಧಿ ಲಿ.ಇದರ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ಥಸದಸ್ಯರೂ ಆಗಿರುವ ಆಲ್ವಿನ್ ಜೋಯಲ್ ನೊರೊನ್ಹಾ ವಹಿಸಿ ,ಸಂಸ್ಥೆಯೂ ಕೇವಲ ಮೂರು ವರುಷಗಳಲ್ಲಿ ಗ್ರಾಹಕ ಜನತೆಯ ಅಚ್ಚುಮೆಚ್ಚಿನ , ವಿಶ್ವಾಸಾರ್ಹ ಸಂಸ್ಥೆಯಾಗಿ , ಕೇವಲ ಆರು ತಿಂಗಳಲ್ಲೇ 6 ಶಾಖೆಗಳನ್ನು ತೆರೆದು , ಆರೂ ಕೋಟಿ ರೂಪಾಯಿವರೆಗಿನ ವ್ಯವಹಾರವು ನಡೆದಿದೆ. ಇದೇ ತಿಂಗಳ ಅಂತ್ಯದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲೂ ಶಾಖೆ ಪ್ರಾರಂಭಗೊಳ್ಳಲಿದ್ದು , ಸುಳ್ಯ ಪೇಟೆಯಲ್ಲೂ ಶಾಖೆ ತೆರಯುವ ಬಗ್ಗೆ ಮಾಹಿತಿ ನೀಡಿದರು. 2025 ರ ವೇಳೆಗೆ ಏನಿಲ್ಲವೆಂದರೂ 25 ಶಾಖೆ ಹೊಂದುವ ಗುರಿ ಇಟ್ಟಿದ್ದೇವೆ ಎಂದು ಹೇಳಿ , ಗ್ರಾಹಕ ಜನತೆಯ ಸಹಕಾರ ಕೋರಿದರು.
ಮುಖ್ಯ ಅತಿಥಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಕ್ಷೇತ್ರಗಳ ಕಾಶಿಯಂತೆ ಹಾಗೂ ಬ್ಯಾಂಕುಗಳ ತವರೂರುರೆಂದು ಕರೆಸಿಕೊಂಡಿದೆ.
ಇಲ್ಲಿನ ಜನರಲ್ಲಿರುವ ಆರ್ಥಿಕ ಶಿಸ್ತು ,ಸಮಯ ಪ್ರಜ್ಞೆಯಿಂದಲೇ ನಮ್ಮ ಜಿಲ್ಲೆಗೂ ಆರ್ಥಿಕ ರಂಗದಲ್ಲೂ ಹೆಸರಿದೆ.ಒಬ್ಬರಿಂದೊಬ್ಬರಿಗೆ ಆರ್ಥಿಕ ಬೆಂಬಲದ ಜೊತೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ಶಾಖೆ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.
ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಝೋನಲ್ ಲೆಫ್ಟಿನೆಂಟ್ ಮೊಹಮ್ಮದ್ ರಫೀಕ್ ದರ್ಬೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ ಇವರುಗಳು ಕೂಡ ಮಾತನಾಡಿ, ಸಂಸ್ಥೆ ಏಳಿಗೆಗೆ ಶುಭ ಕೋರಿದರು. ಕಡಬ ಶಾಖೆ ಅಧ್ಯಕ್ಷ ಸತೀಶ್ ನಾಯಕ್, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ, ಅಸೈಗೋಳಿ ಶಾಖಾ ವ್ಯವಸ್ಥಾಪಕ ಕಿರಣ್ ಬಂಗೇರ , ಮಂಗಳೂರಿನ ಕೇಂದ್ರ ಕಛೇರಿ ವ್ಯವಸ್ಥಾಪಕ ಹರ್ಷಿತ್ ಸಾಲ್ಯಾನ್ , ಪುತ್ತೂರು ಶಾಖೆ ಅಧ್ಯಕ್ಷ ಪುನೀತ್ ವಿ.ಜೆ ಹಾಗೂ ಉಪಾಧ್ಯಕ್ಷೆ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಥಿತಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಈ ವೇಳೆ ವಿವಿಧ ಶಾಖೆಯ ಸಿಬಂದಿಗಳು , ಗ್ರಾಹಕರು ಹಾಜರಿದ್ದರು.ದಿನೇಶ್ ಸುವರ್ಣ ರಾಯಿ ಸ್ವಾಗತಿಸಿ, ನಿರೂಪಿಸಿದರು.
ಸಂಸ್ಥೆಯ ಸೇವೆಗಳು :
ಉಳಿತಾಯ ಖಾತೆ , ಪಿಗ್ಮಿ , ಆರ್.ಡಿ , ಏಫ್.ಡಿ , ಮಾಸಿಕ ಆದಾಯ ಯೋಜನೆ ಸಹಿತ ಹಲವಾರು ಸೌಲಭ್ಯಗಳು ಸಂಸ್ಥೆಯಿಂದ ಲಭ್ಯವಿದ್ದು , ಉಳಿತಾಯ ಖಾತೆ ಮೇಲೆ ವಾರ್ಷಿಕ 7% ಬಡ್ಡಿ ದರ , ಹಾಗೂ ಏಫ್ .ಡಿ ಮೇಲೆ 10% ಬಡ್ಡಿದರ ಗ್ರಾಹಕರಿಗೆ ಸಿಗಲಿದ್ದು , ಹಿರಿಯ ನಾಗರಿಕರಿಗೆ 1% ಅಧಿಕ ಬಡ್ಡಿಯೂ ಸಿಗಲಿದೆ.
ಶುಭಾರಂಭದ ಕೊಡುಗೆ :
ಸಂಸ್ಥೆಯ ಶುಭಾರಂಭದ ಸಲುವಾಗಿ ಆಗಸ್ಟ್ 16 ರ ವರೆಗೆ ನಿಶ್ಚಿತ ಠೇವಣಿ (F.D) ಮೇಲೆ ವಾರ್ಷಿಕ 10.5% ಬಡ್ಡಿದರ ಹಾಗೂ 2 ವರ್ಷ ಮೇಲ್ಪಟ್ಟ ಠೇವಣಾತಿಗಳಿಗೆ 12% ಬಡ್ಡಿದರವನ್ನು ಸಂಸ್ಥೆ ನೀಡುವುದಾಗಿ ಘೋಷಣೆ ಮಾಡಿದೆ.