





ಪುತ್ತೂರು: ದೇಶದಲ್ಲಿ ಮಾತ್ರವಲ್ಲದೇ ಜಗತ್ತಿನಲ್ಲಿ ಭಯೋತ್ಪಾದನೆ ಮಾಡುವ ಭಯೋತ್ಪಾದಕರು ಎಲ್ಲರೂ ಯಾವ ಸಂತತಿಯವರು ಎಂಬುದು ಜಗಜ್ಜಾಹೀರಾಗಿರುವಾಗ ಮಂಗಳೂರು ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರನ್ನು ಭಯೋತ್ಪಾದಕ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಎಂ.ಎಸ್ ಮಹಮ್ಮದ್ ಹೇಳಿರುವುದು ಖಂಡನೀಯವೆಂದು ಮತ್ತು ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಹೇಳಿದರು.


ಹಿಂದೂ ಧರ್ಮದಲ್ಲಿ ಹುಟ್ಟಿ ಅದರ ಸಂಸ್ಕೃತಿಯನ್ನು ಪಾಲಿಸುವವನಿಗೆ ಧರ್ಮದ ಮೇಲೆ ಅಪವಾದ ಹೊರಿಸುವಾಗ ತನ್ನ ಪದವಿಗಿಂತ ದೊಡ್ಡದು ನನ್ನ ಧರ್ಮ ಎಂದು ಎದುರುತ್ತರ ನೀಡಿದ ದಂತ ವೈದ್ಯರಾದ ಭರತ್ ಶೆಟ್ಟಿಯವರು ಹೇಳಿದ್ದು ಸರಿಯಾಗಿದೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟ ಮಾಡಿದ ಭಯೋತ್ಪಾದಕನ ವಿರುದ್ಧ ಮಾತಾನಾಡದ ಹಾಗೂ ತನ್ನದೇ ಪಾರ್ಟಿಯ ಅಖಂಡ ಶ್ರೀನಿವಾಸ ಮೂರ್ತಿಯ ಮನೆಗೆ ಬೆಂಕಿ ಕೊಟ್ಟ ಮತಾಂಧರ ಬಗ್ಗೆ ಮಮಕಾರ ವ್ಯಕ್ತಪಡಿಸದ, ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸಭೆಯ ಒಳಗಡೆಯೇ ಪಾಕಿಸ್ಥಾನ್ ಜಿಂದಾಬಾದ್ ಹಾಕಿದ ದೇಶದ್ರೋಹಿಗಳೊಂದಿಗೆ ಸೌಹಾರ್ಧದಿಂದ ಇರುವ ಕಾಂಗ್ರೇಸಿಗರಿಗೆ ಬಿಜೆಪಿ ಶಾಸಕರ ಬಗ್ಗೆ ಮಾತಾನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.ಈ ಹಿಂದೆ ತನ್ನ ಅಧಿಕಾರವಧಿಯಲ್ಲಿ ಕೇಸರಿ ಭಯೋತ್ಪಾದನೆ ಇದೆ ಎಂದು ಕಟ್ಟುಕತೆ ಸೃಷ್ಟಿಸಿ ದೇಶದಲ್ಲಿ ಹೇಳಹೆಸರಿಲ್ಲದಾದ ಕಾಂಗ್ರೇಸ್ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದರೆ ಹಿಂದೂ ಸಮಾಜ ಅದಕ್ಕೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇ ಎಂದು ಸಾಜ ರಾಧಕೃಷ್ಣ ಆಳ್ವಾ ತಿಳಿಸಿದರು.













