ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಹಾಸ್ಟೆಲ್ ಸ್ಟುಡೆಂಟ್ಸ್ ಯೂನಿಯನ್ ಚುನಾವಣೆ:ಅಧ್ಯಕ್ಷರಾಗಿ ಫಾಯಿಝ ಫಾಳಿಲ, ಪ್ರ.ಕಾರ್ಯದರ್ಶಿಯಾಗಿ ದಾನಿಶ ಕೊಡಗು ಆಯ್ಕೆ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಹಾಸ್ಟೆಲ್ ಸ್ಟೂಡೆಂಟ್ಸ್ ಯೂನಿಯನ್ 2024-25ನೇ ಸಾಲಿನ ನೂತನ ಅದ್ಯಕ್ಷರಾಗಿ ತೃತೀಯ ಶರೀಅತ್ ವಿಭಾಗದ ಫಾಯಿಝ ಅಲ್ ಫಾಳಿಲ ಮದ್ದಡ್ಕ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಕಾಂ ವಿಭಾಗದ ದಾನಿಶ ಕೊಡಗು, ಕಾರ್ಯದರ್ಶಿಯಾಗಿ ಫಿಝಾ ಸಕಲೇಶಪುರ ಆಯ್ಕೆಯಾಗಿದ್ದಾರೆ.


ಎಜುಕೇಶನ್ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಬಿ.ಎ ವಿಭಾಗದ ಸನ ಎ.ಜಿ ಪೊನ್ನಂಪೇಟೆ, ಸದಸ್ಯರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮಿಸ್ಬಾ ಉಡುಪಿ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸಜಿನ ಸಿ.ಎ ಹೊಸಕೋಟೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ದೀನ ಉಡುಪಿ, ನೈರ್ಮಲ್ಯ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಸ್ಮತ್ ಮದ್ದಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರುಗಳಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ರಫೀದ ಮೂಡಿಗೆರೆ, ದ್ವಿತೀಯ ಶರೀಅತ್ ವಿಭಾಗದ ಅಫ್ರತ್ ಮದ್ದಡ್ಕ, ದ್ವಿತೀಯ ಬಿ.ಕಾಂ ವಿಭಾಗದ ಸನ ಪಿ.ಎ ಕುಶಾಲನಗರ ಚುನಾಯಿತರಾದರು.


ಆಹಾರ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಬಿಕಾಂ ವಿಭಾಗದ ಅಫ್ರ ಎಚ್.ಎಸ್ ಹಾಸನ, ಸದಸ್ಯರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಮ್ರ ಮಂಗಳೂರು ಆಯ್ಕೆಗೊಂಡರು.
ಧಾರ್ಮಿಕ ವಿಭಾಗದ ಮುಖ್ಯಸ್ಥರಾಗಿ ತೃತೀಯ ಶರೀಅತ್ ವಿಭಾಗದ ಮಿನಾಝ್ ಉಪ್ಪಿನಂಗಡಿ, ಸದಸ್ಯರಾಗಿ ದ್ವಿತೀಯ ಶರೀಅತ್ ವಿಭಾಗದ ಸುಫೈರತ್ ಕುಶಾಲನಗರ ಆಯ್ಕೆಗೊಂಡರು.


ಆರೋಗ್ಯ ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಬಿಕಾಂ ವಿಭಾಗದ ಸಾನಿಯಾ ಉಪ್ಪಿನಂಗಡಿ, ಸದಸ್ಯರಾಗಿ ಪ್ರಥಮ ಬಿ.ಎ ವಿಭಾಗದ ಸಜ್ನ ನಾಪೋಕ್ಲು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕುಬುರಾ ಶನಿವಾರಸಂತೆ ಆಯ್ಕೆಯಾದರು.
ಶಿಸ್ತು ವಿಭಾಗದ ಮುಖ್ಯಸ್ಥರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಫಿಝ ಸಕಲೇಶಿಪುರ, ಸದಸ್ಯರಾಗಿ ದ್ವಿತೀಯ ಬಿ.ಎ ವಿಭಾಗದ ಸುನೈಜ ಕುಶಾಲನಗರ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಝಹೀರಾ ಪುಂಜಾಲಕಟ್ಟೆ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿದಾ ಕುಶಾಲನಗರ ಅಯ್ಕೆಗೊಂಡರು. ಸಂಸ್ಥೆಯ ಅಡ್ಮಿನಿಸ್ಟ್ರೇಶನ್ ಅಸಿಸ್ಟೆಂಟ್ ಶಬ್ನಂ ನೂತನ ಪ್ರತಿನಿಧಿಗಳಿಗೆ ಪ್ರಮಾಣ ವಚನ ನಡೆಸಿಕೊಟ್ಟರು. ಹಾಸ್ಟೆಲ್ ವಾರ್ಡನ್ ಝುಬೈದ ಕಾರ್ಯಕ್ರಮ ನಿರ್ವಹಿಸಿದರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಸ್ಮತ್ ಸ್ವಾಗತಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಮಿಸ್ಬಾ ವಂದಿಸಿದರು.

ತೃತೀಯ ಬಿಕಾಂ ವಿಭಾಗದ ಅಂತಿಮ ವಿದ್ಯಾರ್ಥಿನಿಯರಾದ ನುಸ್ರತ್ ಬಂಟ್ವಾಳ, ಶಹರಬಾನ್ ಕೊಡಗು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here