ಬೊಳುವಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಪೂಜೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ ಆಟಿ ತಿಂಗಳ ಪ್ರಯುಕ್ತ ಜು.16ರಿಂದ ಅ.16ರ ವರೆಗೆ ಶ್ರೀದೇವರಿಗೆ ಕಲ್ಪೋಕ್ಷ ಸಹಿತ ವಿಶೇಷ ದುರ್ಗಾಪೂಜೆ, ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆಯುತ್ತಿದ್ದು, ಜು.16ರಂದು ರಾತ್ರಿ ದುರ್ಗಾಪೂಜೆ ನಡೆಯಿತು.
ಸಂಜೆ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಳ್ತಿ) ಭಜನಾ ಮಂಡಳಿಯವರಿಂದ ಭಜನೆ, ವೇಣುಗೋಪಾಲ್‌ರವರಿಂದ ಸ್ಯಾಕ್ಸೋಫೋನ್ ವಾದನ, ರಾತ್ರಿ ವಿಶೇಷ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ, ಫಲಾಹಾರ ನಡೆಯಿತು. ಕ್ಷೇತ್ರ ವಿಶ್ವಸ್ಥ ಮಂಡಳಿ ಸದಸ್ಯರು, ಕ್ಷೇತ್ರ ಯುವಕ ವೃಂದದ ಸದಸ್ಯರು, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಸದಸ್ಯರು, ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here