ಪುತ್ತೂರು : ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜುಲೈ 17 ರಂದು ತಪ್ತ ಮುದ್ರಾಧಾರಣೆ ನೆರವೇರಿತು.ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ
ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನೆರೆದ ಭಕ್ತರಿಗೆ ಮುದ್ರಾ ಧಾರಣೆಯನ್ನು ಮಾಡಿದರು. ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ , ದೇವಳದ ಅರ್ಚಕ ಪ್ರಸಾದ ಅಡಿಗ , ಡಾ. ಸುಜಯ ತಂತ್ರಿ ಕೆಮ್ಮಿಂಜೆ , ಶ್ರೀವತ್ಸ ಕೆದಿಲಾಯ ಮುಂತಾದವರು ಸ್ವಾಮೀಜಿಯವರನ್ನು ಬರಮಾಡಿಕೊಂಡರು.
ಹವನದ ಅಗ್ನಿಯಲ್ಲಿ ಕಾಯಿಸಿದ ಲೋಹದ ಮುದ್ರೆಗಳಾದ ಪಾಂಚಜನ್ಯ ಮತ್ತು ಸುದರ್ಶನ ಚಕ್ರಗಳ ಚಿಹ್ನೆಯನ್ನು ಭಕ್ತರ ದೇಹದ ಭಾಗಗಳಿಗೆ ಶಾಸ್ತ್ರೀಯವಾಗಿ ಮುದ್ರಿಸಲಾಯಿತು.
ಈ ಸಂದರ್ಭದಲ್ಲಿ ಹರೀಶ ಪುತ್ತೂರಾಯ, ಅಶೋಕ್ ಕುಮಾರ್ ಪುತ್ತಿಲ, ಹರೀಶ ಉಂಗ್ರುಪುಳಿತ್ತಾಯ, ಪಿ.ಜಿ.ಚಂದ್ರಶೇಖರ್ ರಾವ್ , ಸುಧೀರ್ ಹೆಬ್ಬಾರ್, ಮಾತೆಯರು , ಮಕ್ಕಳು ಉಪಸ್ಥಿತರಿದ್ದರು.