ಕುಂಬ್ರ: ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವು

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಒಳಮೊಗ್ರು ಗ್ರಾಪಂ ವ್ಯಾಪ್ತಿಯ ಕುಂಬ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಅಪಾಯಕಾರಿಯಾದ ಎರಡು ಮರಗಳನ್ನು ಜು.17 ರಂದು ತೆರವು ಮಾಡಲಾಯಿತು. ಕುಂಬ್ರ ಸೇತುವೆಯ ಸಮೀಪದಲ್ಲಿದ್ದ ಎರಡು ಮರಗಳನ್ನು ಅರಣ್ಯ ಇಲಾಖೆ,ಮೆಸ್ಕಾಂ ಇಲಾಖೆ ಹಾಗೂ ಗ್ರಾಪಂ ನ ಸಹಕಾರದೊಂದಿಗೆ ತೆರವು ಮಾಡಲಾಯಿತು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ಹಾಗೂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಕಾರ್ಯದರ್ಶಿ ಜಯಂತಿ, ಅರಣ್ಯ ಇಲಾಖೆ ಅಧಿಕಾರಿ ಮದನ್ ಬಿಕೆ ಹಾಗೂ ಸಿಬ್ಬಂದಿಗಳು ಕುಂಬ್ರ ಮೆಸ್ಕಾಂ ಜೆಇ ರವೀಂದ್ರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ವತಿಯಿಂದ ಜೆಸಿಬಿ ಮೂಲಕ ಮರದ ಗೆಲ್ಲುಗಳನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.

” ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಅದರಂತೆ ಮೆಸ್ಕಾಂ ಇಲಾಖೆ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮರಗಳ ತೆರವು ಮಾಡಿದ್ದಾರೆ. ಗ್ರಾಮದಲ್ಲಿ ಯಾವುದೇ ಅಪಾಯಕಾರಿ ಮರ ಅಥವಾ ಜಾಗ, ನದಿ ಇತ್ಯಾದಿಗಳಿದ್ದರೆ ಪಂಚಾಯತ್ ಗೆ ಮಾಹಿತಿ ನೀಡುವಂತೆ ವಿನಂತಿ.”
– ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here