ಜು.19: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ ಸಮಾರಂಭ

0

ಅಧ್ಯಕ್ಷರಾಗಿ ಸುಬ್ರಮಣಿ ಪಿ.ವಿ., ಕಾರ್ಯದರ್ಶಿಯಾಗಿ ವಿಶಾಲ್, ಸಭಾಪತಿಯಾಗಿ ಶ್ರೀಧರ್ ಕೆ.

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ ಜು.19ರಂದು ಸಂಜೆ 7ಕ್ಕೆ ಮಹಾವೀರ ವೆಂಚರ್ ನಲ್ಲಿ ನಡೆಯಲಿದೆ. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಪದಪ್ರಧಾನ ನಡೆಸಿಕೊಡಲಿದ್ದಾರೆ. ಡಿ.ಆರ್.ಆರ್. ಸಂಜಯ್, ಝಡ್.ಆರ್.ಆರ್. ನವೀನ್ ರೈ ಬನ್ನೂರು, ಪುತ್ತೂರು ರೋಟರಿ ಕ್ಲಬ್ ಯೂತ್ ಸರ್ವೀಸ್ ಡೈರೆಕ್ಟರ್ ಪ್ರೀತಾ ಹೆಗ್ಡೆ ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

ಅಧ್ಯಕ್ಷರಾಗಿ ಸುಬ್ರಮಣಿ ಪಿ.ವಿ., ಉಪಾಧ್ಯಕ್ಷರಾಗಿ ವಿಜಯ್, ಸಭಾಪತಿಯಾಗಿ ಶ್ರೀಧರ್ ಕೆ., ಕಾರ್ಯದರ್ಶಿಯಾಗಿ ವಿಶಾಲ್, ಐಪಿಪಿಯಾಗಿ ಜ್ಯೋತಿಕಾ, ಕೋಶಾಧಿಕಾರಿಯಾಗಿ ಶಶಿಧರ್ ಕೆ. ಮಾವಿನಕಟ್ಟೆ ಆಯ್ಕೆಯಾಗಿದ್ದಾರೆ. ಜತೆ ಕಾರ್ಯದರ್ಶಿಯಾಗಿ ಸೃಜನ್, ಜತೆ ಕೋಶಾಧಿಕಾರಿಯಾಗಿ ಸುಕನ್ಯಾ, ಬುಲೆಟಿನ್ ಎಡಿಟರ್ ಆಗಿ ಸುಪ್ರೀತ್, ಕ್ಲಬ್ ಸರ್ವೀಸ್ ಡೈರೆಕ್ಟರ್ ಆಗಿ ಸುಶಾಂತ್, ಕಮ್ಯೂನಿಟಿ ಸರ್ವೀಸ್ ಡೈರೆಕ್ಟರ್ ಆಗಿ ಪುರುಷೋತ್ತಮ್, ವೊಕೇಷನಲ್ ಸರ್ವೀಸ್ ನಿರ್ದೇಶಕರಾಗಿ ಅಖಿಲೇಶ್, ಇಂಟರ್ ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ನವೀನ್ ಚಂದ್ರ, ಸಾರ್ಜಂಟ್ ಅಟ್ ಆರ್ಮ್ಸ್ ಆಗಿ ಮುರಳಿ ಮೋಹನ್, ಪಿ.ಆರ್.ಓ. ಆಗಿ ಗಣೇಶ್ ಎನ್. ಕಲ್ಲರ್ಪೆ, ಸ್ಪೋರ್ಟ್ಸ್ ಸರ್ವೀಸ್ ಡೈರೆಕ್ಟರ್ ಆಗಿ ಹಿಮಾಂಶು, ಸಾಂಸ್ಕೃತಿಕ ಸರ್ವೀಸ್ ಡೈರೆಕ್ಟರ್ ಆಗಿ ಧನುಷಾ ಹಾಗೂ ಸಂಯೋಜಕರಾಗಿ ರಾಹುಲ್ ಆಚಾರ್ಯ, ರಜತ್, ಶ್ರೇಯಸ್, ಮಹೇಶ್ಚಂದ್ರ, ನವೀನ್ ರೈ, ಶ್ರೀಕಾಂತ್ ಪೂಜಾರಿ ಬಿರಾವು ಆಯ್ಕೆ ಆಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here