ಹಿರೆಬಂಡಾಡಿ:ಮನೆಗೆ ಬಿದ್ದ ಮರ-ಹಾನಿ

0

ಉಪ್ಪಿನಂಗಡಿ: ಉಪ್ಪಿನಂಗಡಿ : ಸತತವಾಗಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಹಿರೆಬಂಡಾಡಿ ಗ್ರಾಮದ ಚೀಂಕ್ರ ಕೊಡಂಗೆ ಎಂಬಲ್ಲಿ ಮರವೊಂದು ಮನೆಗೆ ಬಿದ್ದು ಮನೆಯ ಛಾವಣಿಯು ಹಾನಿಗೊಂಡ ಘಟನೆ ಗುರುವಾರ ಸಂಭವಿಸಿದೆ.


ಜಾನಕಿ ಎಂಬವರ ಮನೆಗೆ ಬಿದ್ದ ಸಮೀಪದ ಮರವು ಮನೆಯ ಛಾವಣಿಯನ್ನು ದ್ವಂಸಗೊಳಿಸಿದ್ದು, ಈ ವೇಳೆ ಮನೆಯಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಪಂಚಾಯತ್ ಸದಸ್ಯರಾದ ಲಕ್ಷ್ಮೀಶ ನಿಡೆಂಕಿ, ನಿತೀನ್ ಗ್ರಾಮಕರಣಿಕ ನರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here