ಹೇಮನಾಥ ಶೆಟ್ಟಿಯವರ ಸಾರಥ್ಯದಲ್ಲಿ ಮಾದರಿ ಕಾರ್‍ಯಕ್ರಮ- ಸವಣೂರು ಸೀತಾರಾಮ ರೈ
ಬಂಟ ಸಮಾಜದ ಒಗ್ಗಟು ಹೆಚ್ಚಿಸುವ ಕಾರ್‍ಯಕ್ರಮ- ಕಾವು ಹೇಮನಾಥ ಶೆಟ್ಟಿ
ಕಾರ್‍ಯಕ್ರಮ ಯಶಸ್ವಿಯಾಗಲಿ- ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ
ಸಮಾಜದ ಹಿತಕ್ಕಾಗಿ ಕಾರ್‍ಯಕ್ರಮ-ದಂಬೆಕ್ಕಾನ ಸದಾಶಿವ ರೈ
ಪುತ್ತೂರು:ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಆ. 10 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿರುವ “ಆಟಿಡೊಂಜಿ ಬಂಟೆರೆ ಸೇರಿಗೆ” ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜು. 22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಪ್ರಾರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಲಾಯಿತು.
ಹೇಮನಾಥ ಶೆಟ್ಟಿಯವರ ಸಾರಥ್ಯದಲ್ಲಿ ಮಾದರಿ ಕಾರ್‍ಯಕ್ರಮ- ಸೀತಾರಾಮ ರೈ
ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಹೇಮನಾಥ ಶೆಟ್ಟಿಯವರ ಸಾರಥ್ಯದಲ್ಲಿ ನಡೆಯುವ ಈ ಕಾರ್‍ಯಕ್ರಮಕ್ಕೆ ನಮ್ಮ ಪೂರ್ಣ ಸಹಕಾರ ಇದೆ. ಬಂಟ ಸಮಾಜದ ಈ ಹಿರಿಮೆಯ ಕಾರ್‍ಯಕ್ರಮ ಹತ್ತೂರಿಗೆ ಹೆಸರನ್ನು ತರಲಿ. ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಸಾಧಕ ಬಂಟರು ಪುತ್ತೂರು ತಾಲೂಕು ಬಂಟರ ಸಂಘದ ಗೌರವವನ್ನು ಪಡೆಯುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಬಂಟ ಸಮಾಜದ ಒಗ್ಗಟು ಹೆಚ್ಚಿಸುವ ಕಾರ್‍ಯಕ್ರಮ- ಹೇಮನಾಥ ಶೆಟ್ಟಿ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಸ್ವಾಗತಿಸಿ, ಬಳಿಕ ಮಾತನಾಡಿ ತಾಲೂಕು ಬಂಟರ ಸಂಘದಿಂದ ಅಭೂತಪೂರ್ವವಾದ ಕಾರ್‍ಯಕ್ರಮ ಆ.10 ರಂದು ಬಂಟರ ಭವನದಲ್ಲಿ ಜರಗಲಿದ್ದು, ಬಂಟ ಭಾಂದವರು ಕುಟುಂಬ ಸಮೇತರಾಗಿ ಈ ಕಾರ್‍ಯಕ್ರಮದಲ್ಲಿ ಭಾಗವಹಿಸಬೇಕು. ಬಂಟ ಸಮಾಜದಲ್ಲಿ ಸಾಧನೆಗೈದ ಶ್ರೇಷ್ಠರನ್ನು ಗೌರವಿಸುವ, ಸನ್ಮಾನಿಸುವ ಅಪೂರ್ವವಾದ ಈ ಕಾರ್‍ಯಕ್ರಮದಲ್ಲಿ ಬಂಟ ಭಾಂದವರ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಹೇಳಿ, ಎಲ್ಲರ ಸಹಕಾರವನ್ನು ಕೋರಿದರು.
ಕಾರ್‍ಯಕ್ರಮ ಯಶಸ್ವಿಯಾಗಲಿ- ಲಕ್ಷ್ಮೀನಾರಾಯಣ ಶೆಟ್ಟಿ
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿಯವರು ಮಾತನಾಡಿ ಬಂಟರ ಸಂಘದ ಆಶ್ರಯದಲ್ಲಿ ನಡೆಯುವ ಈ ಕಾರ್‍ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಸಮಾಜದ ಹಿತಕ್ಕಾಗಿ ಕಾರ್‍ಯಕ್ರಮ-ದಂಬೆಕ್ಕಾನ ಸದಾಶಿವ ರೈ
ತಾಲೂಕು ಬಂಟರ ಸಂಘದ ನಿರ್ದೇಶಕ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ ಬಂಟ ಸಮಾಜದ ಹಿತವನ್ನು ಕಾಪಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್‍ಯಕ್ರಮ ಯಶಸ್ವಿಯಾಗಿ ನಡೆಯಲಿ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೂರ್ಣ ಅನುಗ್ರಹ ದೊರೆಯಲಿ ಎಂದರು
ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ನಿಕಟಪೂರ್ವ ಸಹ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಿಕಟಪೂರ್ವ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ಸುಭಾಸ್ ಕುಮಾರ್ ಶೆಟ್ಟಿ ಆರುವಾರು, ಜೊತೆ ಕಾರ್‍ಯದರ್ಶಿಗಳಾದ ಸ್ವರ್ಣಲತಾ ಜೆ.ರೈ, ಹರಿಣಾಕ್ಷಿ ಜೆ.ಶೆಟ್ಟಿ, ಪುಲಸ್ತ್ಯ ರೈ, ನಿರ್ದೆಶಕರುಗಳಾದ ಸಂಜೀವ ಆಳ್ವ ಹಾರಾಡಿ, ಸುಧೀರ್ ಶೆಟ್ಟಿ ತೆಂಕಿಲ, ನಿತಿನ್ ಪಕ್ಕಳ, ಸತೀಶ್ ರೈ ಕಟ್ಟಾವು, ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಸದಾಶಿವ ರೈ ಸೂರಂಬೈಲು, ಶಶಿಕಿರಣ್ ರೈ ನೂಜಿಬೈಲು, ರಮೇಶ್ ಆಳ್ವ ಅಲೆಪ್ಪಾಡಿ, ಪ್ರಕಾಶ್ ರೈ ಸಾರಕರೆ, ಶಶಿರಾಜ್ ರೈ ಮುಂಡಾಳಗುತ್ತು, ರವಿಪ್ರಸಾದ್ ಶೆಟ್ಟಿ ಬನ್ನೂರು, ನಿಕಟಪೂರ್ವ ನಿರ್ದೇಶಕಿ ಮಾಧವಿ ಬಿ.ರೈ ಉಪ್ಪಿನಂಗಡಿ, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರು, ಕಾರ್‍ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಮಾಜಿ ಕೋಶಾಧಿಕಾರಿ ಅನುಶ್ರೀ ರೈ, ಯುವ ಬಂಟರ ವಿಭಾಗದ ಪ್ರಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಬಂಟರ ಸಂಘದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಮನ್ಮಥ ಶೆಟ್ಟಿ, ಭವಾನಿಶಂಕರ್ ಶೆಟ್ಟಿ, ಸಂತೋಷ್ ರೈ, ಸುಜೀರ್ ಶೆಟ್ಟಿ, ಭಾರತಿ ರೈ ನೆಲ್ಯೊಟ್ಟುರವರುಗಳು ಉಪಸ್ಥಿತರಿದ್ದರು.
ಬಂಟರ ಪ್ರತಿ ಮನೆಮನೆಗೆ ಅಮಂತ್ರಣ
ಆ.10 ರಂದು ಬಂಟರ ಸಂಘದ ಆಶ್ರಯದಲ್ಲಿ ನಡೆಯುವ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್‍ಯಕ್ರಮದ ಆಮಂತ್ರಣ ಪತ್ರವನ್ನು ಅವಿಭಜಿತ ಪುತ್ತೂರು ತಾಲೂಕಿನ ಬಂಟರ ಪ್ರತಿ ಮನೆ ಮನೆಗೆ ತಲುಪಿಸುವ ಕಾರ್‍ಯವನ್ನು ಮಾಡಲಿದ್ದೇವೆ. ವಿಶೇಷ ಸಾಧನೆಗೈದ ಬಂಟ ಸಮಾಜದ ಡಾ.ಪ್ರಕಾಶ್ ಶೆಟ್ಟಿ, ದ.ಕ,ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ, ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮಾಜದ 14 ಮಂದಿ ಸಾಧಕರಿಗೆ ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು ನೀಡಲಿದ್ದೇವೆ. ಅಭೂತಪೂರ್ವವಾದ ಈ ವಿಶಿಷ್ಟ ಕಾರ್‍ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆಯಲಿದೆ.
ಕಾವು ಹೇಮನಾಥ ಶೆಟ್ಟಿ
ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು