ಪಾಣಾಜೆ: ಹಿಂದೂ ಧಾರ್ಮಿಕ ಶಿಕ್ಷಣ -ಮಾಹಿತಿ ಸಭೆ

0

ಪಾಣಾಜೆ: ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಸಂಘ ಹಾಗೂ ಕುಣಿತ ಭಜನಾ ತಂಡದ ನೇತೃತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಪ್ರಾರಂಭವಾದ ಹಿಂದೂ ಧಾರ್ಮಿಕ ಶಿಕ್ಷಣ ದ ಮಾಹಿತಿ ನೀಡುವ ಕಾರ್ಯಕ್ರಮ ಪಾಣಾಜೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಜು. 21 ರಂದು ನಡೆಯಿತು.

ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಕ್ಕಳಿಗೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಕಥೆ ಮತ್ತು ಆಚಾರ ವಿಚಾರ, ಶ್ಲೋಕ ಮತ್ತು ಅದರ ಅರ್ಥ ಹೇಳಿಕೊಡುದರ ಮೂಲಕ ಮಾಹಿತಿ ನೀಡಿದರು. ರೂಪಲೇಖ ಪಾಣಾಜೆ ಇವರು ಜೀವನದಲ್ಲಿ ಸಂಸ್ಕಾರ ಕ್ಕೆ ಇರುವ ಪ್ರಾಮುಖ್ಯತೆ ತಿಳಿಸಿದರು. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯಗುರು ಶಿವಕುಮಾರ್ ಭಟ್ ಕಾಕೆಕೊಚ್ಚಿ ವಹಿಸಿದರು. ಪಾಣಾಜೆ ಸಿಎ ಬ್ಯಾಂಕ್ ಉಪಾಧ್ಯಕ್ಷ ಡಾ. ಅಖಿಲೇಶ್ ಅರ್ಧಮೂಲೆ, ನಿರ್ದೇಶಕಿ ಗುಣಶ್ರೀ ಪರಾರಿ, ಕುಣಿತ ಭಜನೆ ತಂಡದ ವ್ಯವಸ್ಥಾಪಕ ಗಣಪತಿ ಬಲ್ಯಾಯ, ಉದಯ ಸುಡುಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪ್ರಾರ್ಥನೆಯೊಂದಿಗೆ, ರವೀಂದ್ರ ಭಂಡಾರಿ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here