ಗುಡ್ಡ ಕುಸಿತ: ಮಣ್ಣಿನಲ್ಲಿ ಸಿಲುಕಿದ ಪೊಲೀಸ್ ವಾಹನ

0

ಉಪ್ಪಿನಂಗಡಿ: ಸತತ ಗುಡ್ಡ ಕುಸಿತಕ್ಕೆ ಸಿಲುಕಿರುವ ಶಿರಾಡಿ ಘಾಟ್ ಪರಿಸರದಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು, ಪೊಲೀಸ್ ವಾಹನವೊಂದು ಗುಡ್ಡ ಕುಸಿದ ಮಣ್ಣಿನಲ್ಲಿ ಸಿಲುಕಿದ ಘಟನೆ ವರದಿಯಾಗಿದೆ.

ಶಿರಾಡಿ ಘಾಟ್ ಪರಿಸರದ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಗುಡ್ಡ ಸಂಭವಿಸಿದ್ದು, ಸಂಚಾರ ನಿಯಂತ್ರಣದ ಕಾರಣಕ್ಕೆ ಹೆದ್ದಾರಿ ಬದಿ ನಿಲ್ಲಿಸಲಾದ ಪೊಲೀಸ್ ಇಲಾಖೆಯ ವಾಹನವೇ ಗುಡ್ಡ ಕುಸಿತದ ಮಣ್ಣಿಗೆ ಸಿಲುಕಿ ಸಂಕಷ್ಠಕ್ಕೆ ಒಳಪಡುವಂತಾಯಿತು. ತಕ್ಷಣವೇ ಮಣ್ಣನ್ನು ತೆರವುಗೊಳಿಸಿ ಪೊಲೀಸ್ ವಾಹನವನ್ನು ಸ್ಥಳಾಂತರಿಸಲಾಯಿತು.

LEAVE A REPLY

Please enter your comment!
Please enter your name here