ಮುಡಿಪುವಿನಲ್ಲಿ ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ವಿಂಶತಿ ಸರಣಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ “ವಿಂಶತಿ ಸಂಭ್ರಮ”ದ ಸರಣಿ ತಾಳಮದ್ದಳೆ ಮೂರನೆಯ ಕೂಟವು ಜು.24ರಂದು ಮುಡಿಪು ವಿಶ್ವಭಾರತಿ ಯಕ್ಷ ಸಂಜೀವಿನಿ ರಜತ ಸಂಭ್ರಮ ಪ್ರಯುಕ್ತ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇದರ ಸಹಭಾಗಿತ್ವದಲ್ಲಿ ನಡೆಯಿತು.


ರಾಮಾಯಣ ದಶಪರ್ವ. ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಅಡಿಯಲ್ಲಿ ಪಾರ್ತಿಸುಬ್ಬ ವಿರಚಿತ”ಚೂಡಾಮಣಿ”ಎಂಬ ಆಖ್ಯಾನದೊಂದಿಗೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಆಚಾರ್ಯ ನೇರಂಕಿ, ಶ್ರೀವತ್ಸ ಸೋಮಯಾಜಿ ಸಹಕರಿಸಿದರು. ಮುಮ್ಮೇಳದಲ್ಲಿ, ಶುಭಾ ಜೆ.ಸಿ.ಅಡಿಗ( ಹನೂಮಂತ), ಗಾಯತ್ರಿ ಹೆಬ್ಬಾರ್ (ಸೀತೆ), ಕಿಶೋರಿ ದುಗ್ಗಪ್ಪ ನಡುಗಲ್ಲು (ಶೃಂಗಾರ ರಾವಣ), ಹರಿಣಾಕ್ಷಿ ಜೆ ಶೆಟ್ಟಿ( ಲಂಕಿಣಿ), ಶಾರದಾ ಅರಸ್ ( ಸರಮೆ) ಸಹಕರಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ವೇಷಧಾರಿ ಸುಬ್ರಾಯ ಹೊಳ್ಳ ಕಾಸರಗೋಡು ಹಾಗೂ ಮತ್ತಿತರ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕ, ವಿಶ್ವ ಭಾರತಿ ಟ್ರಸ್ಟ್ ಮುಡಿಪು ಇದರ ಸಂಚಾಲಕ ಪ್ರಶಾಂತ್ ಹೊಳ್ಳ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here