ಈಶ್ವರಮಂಗಲ:ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಸಿ ಆರ್ ಪಿ ಎಫ್ ಸೈನಿಕ ವಿದ್ಯಾಧರ ಎನ್ ಪಟ್ಟೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಗಿಲ್ ನಲ್ಲಿ ನಡೆದ ಯುದ್ಧದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಕ್ಷಕಿ ಅನುಶ್ರೀ ಮಾತನಾಡಿ ಪಾಕ್ ಸೈನಿಕರ ವಿರುದ್ಧ ಎರಡು ತಿಂಗಳುಗಳ ಕಾಲ ಸತತವಾಗಿ ಹೋರಾಡಿದ ಫಲವೇ ಕಾರ್ಗಿಲ್ ವಿಜಯೋತ್ಸವ ಎಂದು ಹೇಳಿದರು. ಶಿಕ್ಷಕಿ ಪ್ರಮೀಳಾ ಸೈನಿಕ ವಿಧ್ಯಾದರರವರ ಕಿರುಪರಿಚಯವನ್ನು ಮಾಡಿದರು. ಸೈನಿಕ ವಿಧ್ಯಾದರ ಶಾಲಾ ಆಡಳಿತ ಮಂಡಳಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಪ್ರಾಂಶುಪಾಲ ಕೆ ಶಾಮಣ್ಣ, ಆಡಳಿತ ಮಂಡಳಿಯ ಸದಸ್ಯ ಶಿವರಾಮ ಶರ್ಮ ನಾಗಪ್ಪ ಗೌಡ ಬೊಮ್ಮಟ್ಟಿ ಮತ್ತು ನಹುಷ, ಮುಖ್ಯ ಶಿಕ್ಷಕಿಯರಾದ ಸೌಮ್ಯ ಎ ಹಾಗೂ ಲತಾ ಡಿ ಕೆ ಉಪಸ್ಥಿತರಿದ್ದರು. ಶಿಕ್ಷಕಿ ಧನಲಕ್ಷ್ಮಿ ಸ್ವಾಗತಿಸಿ, ಶಿಕ್ಷಕ ಉತ್ತಮ ವಂದಿಸಿದರು .ವಿದ್ಯಾರ್ಥಿನಿ ಕಾವ್ಯ ಜಿ ರಾವ್ ಕಾರ್ಯಕ್ರಮ ನಿರೂಪಿಸಿದರು.