ಬನ್ನೂರು ಶಿವಪಾರ್ವತಿ ಮಂದಿರ ಸಭಾಭವನದಲ್ಲಿ ಗುರುಪೂಜೆ

0

ಪುತ್ತೂರು: ಭಾರತ ದೇಶದ ಮಹಾತ್ಮರು ಭಗವಧ್ವಜದ ನೆರಳಿನಲ್ಲಿ ಜಯ ಕಂಡವರು. ಭಗವಧ್ವಜ ಜ್ಞಾನ, ಶೌರ್ಯ, ತ್ಯಾಗದ ಪ್ರತೀಕವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಅವರು ಹೇಳಿದರು.
ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಜು.28ರಂದು ನಡೆದ ಬನ್ನೂರು ಶಾಖೆಯ ಗುರುಪೂಜೆಯಲ್ಲಿ ಅವರು ಬೌಧಿಕ್ ನೀಡಿದರು. ಗುರುಪರಂಪರೆಯ ದೇಶ ನಮ್ಮದು. ಇಂತಹ ಗುರು ಪರಂಪರೆಯನ್ನು ಹೊಂದಿರಲು ನಮ್ಮಲ್ಲಿ ಸಮರ್ಪಣೆ ಭಾವ ಇರಬೇಕು ಹೊರತು ಸ್ವಾರ್ಥ ಇರಬಾರದು ಎಂದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ 1 ಲಕ್ಷ ಶಾಖೆಯ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಹತ್ತಿರದ ಶಾಖೆಯನ್ನು ಗಟ್ಟಿಗೊಳಿಸಬೇಕೆಂದರು. ಕಾರ್ಯಕ್ರಮದಲ್ಲಿ ಸಂಘ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಮತ್ತು ಗುರೂಜಿ ಗೋಳವಾಲ್ಕರ್ ಅವರ ಭಾವಚಿತ್ರಗಳಿಗೆ ನಮಿಸಿ ಭಗಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಗುರುಪೂಜೆಯಲ್ಲಿ ಪಾಲ್ಗೊಂಡವರು ಧ್ವಜ ಪ್ರಣಾಮ್ ಮಾಡಿ ನಿಧಿ ಸಮರ್ಪಣೆ ಮಾಡಿದರು. ಅಮೃತ್ ಆರ್ ಗೌಡ ಮುಖ್ಯಶಿಕ್ಷಕರಾಗಿದ್ದು, ಚಿಂತನ್ ಸಂಘ ಗೀತೆ ಹಾಡಿದರು.

LEAVE A REPLY

Please enter your comment!
Please enter your name here