ಸವಣೂರಿನಲ್ಲಿ ಉಚಿತ ನೇತ್ರಾ ತಪಸಣಾ ಶಿಬಿರ, ಕನ್ನಡಕ ವಿತರಣೆ

0

ಪುತ್ತೂರು : ಒಡಿಯೂರು ಗುರುದೇವಾನಂದ ಸ್ವಾಮೀಜಿ ಅವರ ಜನ್ಮ ದಿನೋತ್ಸವ – ಸೇವಾ ಸಂಭ್ರಮ ಗ್ರಾಮೋತ್ಸವ 2024 ಸಮಿತಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸವಣೂರು ಕಡಬ ವಲಯ, ರೋಟರಿ ಕ್ಲಬ್ ಪುತ್ತೂರು, ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪುತ್ತೂರು, ಮಂಗಳೂರು, ಸವಣೂರು ಸಿ.ಎ.ಬ್ಯಾಂಕ್, ಸವಣೂರು ಯುವಕ ಮಂಡಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ ಹಾಗೂ ಗ್ರಾಮ ಪಂಚಾಯತ್ ಸವಣೂರು ಇವರ ಜಂಟಿ ಸಹಯೋಗದಲ್ಲಿ ಜು. 28 ರಂದು ಸವಣೂರು ವಿನಾಯಕ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣಾ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ವಿದ್ಯಾರಶ್ಮಿ ಸಂಸ್ಥೆಯ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. . ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್ , ಡಾl ಸ್ನೇಹ ಪ್ರಸಾದ್ ನೇತ್ರಾಲಯಯದ ಡಾ.ಸ್ನೇಹ , ಪಾಲ್ತಾಡಿ ಪ್ರಾ.ಆರೋಗ್ಯ ಕೇಂದ್ರದ ವೈಧಾಧಿಕಾರಿ ಡಾ| ಮಧು , ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಒಡಿಯೂರು ಶ್ರೀ ವಿ.ವಿ.ಸೌ.ಸಂ(ನಿ ) ಪುತ್ತೂರು ಶಾಖಾ ವ್ಯವಸ್ಥಪಾಕರಾದ ಪವಿತ್ರ ಪ್ರಸಾದ್, ಉದ್ಯಮಿ .ಎನ್ ಸುಂದರ ರೈ , ಘಟ ಸಮಿತಿ ಸವಣೂರು ವಲಾಯಾಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು., ಕಡಬ ತಾಲ್ಲೂಕು ಮೇಲ್ವಿಚಾರಕಿ ಕಾವ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಸ್ವಾಗತಿಸಿ, ಸವಣೂರು ವಲಯ ಘಟ ಸಮಿತಿ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ವಂದಿಸಿದರು. ಘಟ ಸಮಿತಿ ಸವಣೂರು ಸಂಘಟನಾ ಕಾರ್ಯದರ್ಶಿ ಉಮೇಶ್ ಬೇರಿಕೆ ಕುಮಾರಮಂಗಲ, ಸವಣೂರು , ಸವಣೂರು ಘಟ ಸಮಿತಿ ಪದಾಧಿಕಾರಿ ಪುಟ್ಟಣ್ಣ ಪರಣೆ ಹಾಗೂ ಸವಣೂರು ವಲಯ ಘಟ ಸಮಿತಿ ಅಧ್ಯಕ್ಷೆ ದೇವಿಕಾ, ಕಾರ್ಯದರ್ಶಿ ಅಕ್ಷತಾ, ಸೇವಾ ದೀಕ್ಷೀತೆಯರಾದ ಹರಿಣಾಕ್ಷಿ, ಕವಿತಾ, ಸರಸ್ವತಿ, ನಳಿನಾಕ್ಷಿ, ಗೀತಾ, ಜಯಲಕ್ಷ್ಮೀ ಹಾಗೂ ಸಂಯೋಜಕಿ ವೇದಾವತಿರವರುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here