ಪುತ್ತೂರು: ಮುಳುಗು ಸೇತುವೆಯಾಗಿರುವ ಚೆಲ್ಯಡ್ಕ ಸೇತುವೆಯಲ್ಲಿ ಕುಸಿದ ಸ್ಲ್ಯಾಬ್ ನ ದುರಸ್ಥಿ ಕಾರ್ಯಕ್ಕೆ ಗ್ರಾ.ಪಂ ಮನವಿಗೆ ತಕ್ಷಣ ಪಿಡಬ್ಲ್ಯು ಇಲಾಖೆ ಸ್ಪಂಧಿಸಿ ತಾತ್ಕಾಲಿಕ ದುರಸ್ಥಿ ಕಾರ್ಯ ನಡೆಸಿದೆ.
ಚೆಲ್ಯಡ್ಕ ಸೇತುವೆ ಮೇಲೆ ಸಣ್ಣ ಬಿರುಕು ಉಂಟಾಗಿದ್ದು ಅದನ್ನು ಇತ್ತೀಚೆಗೆ ದುರಸ್ತಿ ಮಾಡಲಾಗಿತ್ತು.
ದುರಸ್ತಿ ಕಾಮಗಾರಿ ಮಾಡುವಾಗ ಅಲ್ಲಿಗೆ ಕಾಂಕ್ರೀಟ್ ಹಾಕದೆ ಕೇವಲ ಜಲ್ಲಿ ಹಾಕಿ ಬಿರುಕು ಮುಚ್ಚಿದ್ದರು. ಆದರೆ ಹಾಕಿದ ಜಲ್ಲಿ ಜು.30 ರಂದು ಬಂದ ನೀರಿನಲ್ಲಿ ಕೊಚ್ಚಿ ಹೋಗಿದ್ದು ಈಗ ಮತ್ತೆ ಗುಂಡಿ ಬಿದ್ದ ಕಾರಣ ಅಗತ್ಯ ವಾಹನಗಳ ಒಡಾಟಕ್ಕೆ ತೊಂದರೆ ಉಂಟಾಗಿತ್ತು. ಈ ಕುರಿತು ಗ್ರಾಪಂ ತಾ.ಪಂ ಇ.ಒ ಗೆ ಮನವಿ ಮಾಡಿದ್ದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ತಾಲೂಕು ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ಸಭೆಯಲ್ಲಿ ತಹಸೀಲ್ದಾರ್ ಅವರ ಗಮನಕ್ಕೆ ತಂದರು. ಈ ವೇಳೆ ಪಿಡಬ್ಲ್ಯು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಾರಾಮ್ ಅವರು ತಕ್ಷಣ ದುರಸ್ಥಿ ಕಾರ್ಯದ ಭರವಸೆ ನೀಡಿದರು. ಸಂಜೆ ವೇಳೆ ಚೆಲ್ಯಡ್ಕ ಸೇತುವೆಯಲ್ಲಿ ಸ್ಲ್ಯಾಬ್ ದುರಸ್ಥಿ ಕಾರ್ಯ ನಡೆಸಲಾಗಿದ್ದು, ಆದರೆ ಸೇತುವೆ ಮುಳುಗುವ ಸಂದರ್ಭ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.