ಪ್ರಿಯದರ್ಶಿನಿಯಲ್ಲಿ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ- ಪದ ಪ್ರದಾನ ಕಾರ್ಯಕ್ರಮ

0

ಗುರಿಯನ್ನಿಟ್ಟುಕೊಂಡು ಕೆಲಸ ಮಾಡಿದಾಗ ಯಶಸ್ಸು ಸಾಧ್ಯ- ರೊಟೇರಿಯನ್ ಸುರೇಶ್

ಬೆಟ್ಟಂಪಾಡಿ: ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ರೋಟರ್ಯಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ವಿದ್ಯಾಗಿರಿ ಬೆಟ್ಟಂಪಾಡಿಯಲ್ಲಿ ಜು.27ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಪೂರ್ವಾಧ್ಯಕ್ಷ ವೆಂಕಟರಮಣಗೌಡ ಕಳುವಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಸೇವೆಗೆ ಮೀಸಲಾದ ಸಂಸ್ಥೆ ಇದು ಸಹಕಾರ ಮನೋಭಾವನೆ ಇದರ ಉದ್ದೇಶ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸುರೇಶ್ ಮಾತನಾಡಿ ʻಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ರೋಟರ್ಯಾಕ್ಟ್ ವತಿಯಿಂದ ಈ ಶಾಲೆಗೆ  ಸಹಕರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

2024 -25ನೇ ಸಾಲಿನ ರೋಟರ್ಯಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮ ನಡೆದು ಅಧ್ಯಕ್ಷರಾಗಿ 9ನೇ ತರಗತಿ ವಿದ್ಯಾರ್ಥಿ ಜಯ ಸ್ವರೂಪ ಹಾಗೂ ಕಾರ್ಯದರ್ಶಿಯಾಗಿ 9ನೇ ತರಗತಿ ವಿದ್ಯಾರ್ಥಿನಿ ರಿಧಿ ರೈ ಆಯ್ಕೆಗೊಂಡರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಕಾರ್ಯದರ್ಶಿ ಸೋನಾರಿಟಾ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಎನ್. ಸ್ವಾಗತಿಸಿ, 9ನೇ ತರಗತಿ ವಿದ್ಯಾರ್ಥಿನಿ ರಿಧಿ ವಂದಿಸಿದರು. ಸುಂದರ ರೈ ಬಲ್ಕಾಡಿ, ಅಶೋಕ್ ಆಚಾರ್ಯ, ಉಮೇಶ್ ಎಂ ಉಪಸ್ಥಿತರಿದ್ದರು. ಇಂಟರಾಕ್ಟ್ ಕ್ಲಬ್ ನ ಚೇರ್‌ ಮ್ಯಾನ್ ಸನತ್ ಕುಮಾರ್ ರೈ ಕಾರ್ಯಕ್ರಮವನ್ನು ಸಂಘಟಿಸಿ, ಇಂಟರ್ಯಾಕ್ಟ್ ಕ್ಲಬ್ ಕೋರ್ಡಿನೇಟರ್ ಪ್ರಶಾಂತ್ ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here