ಕೊಡಗು ಜಿಲ್ಲಾ ಪಂಚಾಯತ್ ಅಧೀಕ್ಷಕಿ ಕುಂಬ್ರದ ಪ್ರೇಮಾ ಬಿ.ರೈ ಸೇವಾ ನಿವೃತ್ತಿ

0

ಪುತ್ತೂರು: ಕೊಡಗು ಜಿಲ್ಲಾ ಪಂಚಾಯತ್ ಅಧೀಕ್ಷಕಿಯಾಗಿದ್ದ ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಪ್ರೇಮಾ ಬಿ.ರೈ ಜು.31 ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗ ಮಡಿಕೇರಿಯಲ್ಲಿ 1986 ರಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇರ್ಪಡೆಗೊಂಡು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸಿ 2022 ರಲ್ಲಿ ಅಧೀಕ್ಷಕಿಯಾಗಿ ಪದೋನ್ನತಿ ಹೊಂದಿ ಸುಮಾರು 38 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತಿ ಹೊಂದಿರುತ್ತಾರೆ. ಇವರು ಒಳಮೊಗ್ರು ಗ್ರಾಮದ ಕುಂಬ್ರ ದಿ.ತ್ಯಾಂಪಣ್ಣ ರೈ ಮತ್ತು ಹೇಮಾವತಿ ರೈಗಳ ಪುತ್ರಿಯಾಗಿದ್ದು ಕೊಡಗಿನ ನಿವೃತ್ತ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಬಾಲಚಂದ್ರ ರೈಯವರ ಪತ್ನಿಯಾಗಿದ್ದಾರೆ. ಪ್ರಸ್ತುತ ಕುಂಬ್ರದಲ್ಲಿ ಮಕ್ಕಳಾದ ಶುತಿ ಮಂಜುನಾಥ ರೈ, ಪುತ್ರ ದರ್ಶನ್ ಬಿ.ರೈ ಹಾಗೂ ಮೊಮ್ಮಗ ಊರ್ಜಿತ್ ಎಂ.ರೈಯವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here