ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ನ 2023-24 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಆ.6 ರಂದು ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಬರ್ಮಣ್ಣ ಗೌಡರವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಬೀಡು, ಸದಸ್ಯರಾದ ರತನ್ ರೈ ಕುಂಬ್ರ, ವಿಠಲ ರೈಮಿತ್ತೋಡಿ, ಸುಜಾತ ರೈ, ಅಸ್ಮಾ ಮತ್ತು ರೇವತಿ ಉಪಸ್ಥಿತರಿದ್ದರು. ಐಇಸಿ ಸಂಯೋಜಕ ಭರತ್ರಾಜ್ರವರು ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಇದಲ್ಲದೆ ತಾ.ಕಾರ್ಯಕ್ರಮ ಸಂಯೋಜಕಿ ಸೌಮ್ಯರವರು ಮಾಹಿತಿ ನೀಡಿದರು. ಇಂಜಿನಿಯರ್ಗಳಾದ ಶ್ರೀಲಕ್ಷ್ಮೀ, ಆಕಾಂಕ್ಷ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. 5 ಎಕರೆದೊಳಗೆ ಜಾಗವಿರುವ ರೈತರನ್ನು ಸಣ್ಣ ರೈತ ಎಂದು ಘೋಷಣೆ ಮಾಡುವ ಮೂಲಕ ಅವರಿಗೆ ಸಣ್ಣ ರೈತ ಸರ್ಟೀಫಿಕೇಟ್ ಕೊಟ್ಟು ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಮೃದುಳಾ, ಗಣೇಶ್, ವಿದ್ಯಾಪ್ರಸಾದ್, ಶಶಿಪ್ರಭಾ ರೈ ಸಹಕರಿಸಿದ್ದರು.
ಕೆದಂಬಾಡಿ ಗ್ರಾಪಂನಲ್ಲಿ ನರೇಗಾದಲ್ಲಿ ಒಟ್ಟು 5612 ಮಾನವ ದಿನಗಳ ಕೆಲಸ ನಡೆದಿದ್ದು ಕೂಲಿ ವೆಚ್ಚ ರೂ.1773392 ಹಾಗೂ ಸಾಮಾಗ್ರಿ ಮೊತ್ತ ರೂ.403419 ಪಾವತಿಸಲಾಗಿದೆ.