ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿ ಆಗಿರುವ ಅಸಮರ್ಪಕ ಡಾಮರೀಕರಣದಿಂದಾಗಿ ವಾಹನ ಸಂಚಾರ ಮತ್ತು ನಡೆದುಕೊಂಡು ಹೋಗಲು ಕಷ್ಟವಾಗಿದ್ದು, ಈ ಕುರಿತು ಸ್ಥಳ ತನಿಖೆ ಮಾಡಿ ಸೂಕ್ತ ಕ್ರಮಕೈಗೊಳ್ಳವಂತೆ ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಪುತ್ತೂರು ತಾಲೂಕು ಸಮಿತಿಯ ನಿಯೋಗದಿಂದ ಪುತ್ತೂರು ನಗರಸಭೆ ಪೌರಾಯುಕ್ತರಿಗೆ ದೂರು ನೀಡಲಾಗಿದೆ.
ಮಳೆಗಾಲದ ಸಂದರ್ಭ ಪರ್ಲಡ್ಕ, ಕೋರ್ಟ್‌ರಸ್ತೆಗೆ ಅಸಮರ್ಪಕವಾದ ಡಾಮರೀಕರಣ ಮಾಡಲಾಗಿದ್ದು, ಇದರಿಂದ ರಸ್ತೆಗೆ ಹಾಕಲಾದ ಡಾಮರು ಎದ್ದು ಹೋಗಿದೆ. ಹಾಗಾಗಿ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ನಡೆದುಕೊಂಡು ಹೋಗಲು ತೀರಾ ಕಷ್ಟವಾಗಿದ್ದು, ಈ ಕುರಿತು ಸ್ಥಳ ತನಿಖೆ ಮಾಡಿ ಸ್ಥಳ ಪರಿಶೀಲನೆ ಮಾಡಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿಯೋಗ ಮನವಿ ಮಾಡಿದೆ.
ಅಧಿವಕ್ತಾ ಪರಿಷತ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಜಯಪ್ರಕಾಶ್ ಎನ್, ಕಾರ್ಯದರ್ಸಿ ದೀಪಕ್ ಬೊಳುವಾರು, ವಿಭಾಗ ಪ್ರಮುಖ್ ಚೇತನ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಪ್ರಸಾದ್, ಉಪಾಧ್ಯಕ್ಷೆ ಸುಮಾ ಟಿ.ಆರ್, ಸದಸ್ಯರಾದ ವೆಂಕಟೇಶ್, ವಮಲೇಸ್, ಅಶ್ವಿತ್ ಕಂಡಿಗ, ಅಕ್ಷಿತ್ ಎಮ್, ಅಶೋಕ್ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ಪೌರಾಯುಕ್ತರು ಮರು ಡಾಮರೀಕರಣ ಮಾಡಲಾಗುತ್ತದೆ ಎಂದು ತಿಳಿಸಿರುವುದಾಗಿ ಅಧಿವಕ್ತಾ ಪರಿಷತ್‌ನ ಅಧ್ಯಕ್ಷ ಜಯಪ್ರಕಾಶ್ ಎನ್ ಮತ್ತು ಕಾರ್ಯದರ್ಶಿ ದೀಪಕ್ ಬೊಳುವಾರು ತಿಳಿಸಿದ್ದಾರೆ.