ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಹಗರಣಗಳಿಂದ ತುಂಬಿದೆ ಎಂದು ಆರೋಪಿಸಿ ಬಿ.ಜೆ.ಪಿ ಮತ್ತು ಜೆಡಿಎಸ್‌ನ ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 250 ಕ್ಕೂ ಹೆಚ್ಚು ಕಾರ್ಯಕರ್ತರು, ಪ್ರಮುಖರು 5 ಬಸ್ ಮತ್ತು 6 ಕಾರುಗಳ ಮೂಲಕ ಆ.6ರಂದು ರಾತ್ರಿ ಪಾದಯಾತ್ರೆಗೆ ತೆರಳಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ರಾತ್ರಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿ ಬಳಿಕ ಮೈಸೂರಿಗೆ ಹೊರಟರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದ ಒಟ್ಟು 7 ಮಹಾಶಕ್ತಿಕೇಂದ್ರದ ಅಧ್ಯಕ್ಷರು ಪದಾಧಿಕಾರಿಗಳು, 54 ಶಕ್ತಿ ಕೇಂದ್ರದ ಪ್ರಮುಖರು ಪಾದಯಾತ್ರೆಗೆ ತೆರಳಿದರು.