





ಪುತ್ತೂರು: ಕರ್ನಾಟಕ ಸರಕಾರ ಕ್ಷೇತ್ರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆ ಪುತ್ತೂರು ಇವರ ಸಹಯೋಗದಲ್ಲಿ ಆಗಸ್ಟ್ 5ರಂದು ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಕರಾಟೆ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಸ್ವರೂಪ್ ಕೃಷ್ಣ ಪ್ರಥಮ ಸ್ಥಾನ ಹಾಗು 9ನೇ ತರಗತಿಯ ರಿಶೋನ್ ಲಸ್ರಾದೋ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಸ್ವರೂಪ್ ಕೃಷ್ಣ ರವರು ಶ್ರೀಯುತ ಕೃಷ್ಣ ಪ್ರಸಾದ್ ಮತ್ತು ಸೌಮ್ಯ ರವರ ಪುತ್ರನಾಗಿದ್ದು ದೇವಿಪ್ರಸಾದ್ ರವರ ಶಿಷ್ಯರಾಗಿರುತ್ತಾರೆ.





ರಿಶೋನ್ ಲಸ್ರಾದೋ ರೋಶನ್ ಲಾಸ್ತಾದೋ ಮತ್ತು ಸುಶಾಂತಿ ಪುತ್ರನಾಗಿದ್ದು ಸೆನ್ಸಾಯಿ ಮಾಧವ ಅಳಿಕೆ ಮತ್ತು ರೋಹಿತ್ ಎಸ್.ಎನ್ ರವರ ಶಿಶ್ಯರಾಗಿರುತ್ತಾರೆ.
ಶಾಲೆಯ ದೈಹಿಕ ಶಿಕ್ಷಕರಾದ ಹರೀಶ್ ಹಾಗೂ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಂತಿ ಆಗ್ನೆಸ್ ಬಿ.ಎಸ್ ಮಾರ್ಗದರ್ಶನ ನೀಡಿರುತ್ತಾರೆ.








