ಪುತ್ತೂರು: ಬಪ್ಪಳಿಗೆ ಅಂಗನವಾಡಿ ಕೇಂದ್ರದಲ್ಲಿ ಆ.8ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಇದರ ವತಿಯಿಂದ ಕಿಶೋರ ಮತ್ತು ಕಿಶೋರಿಯರಿಗೆ ಮಾಹಿತಿ ಕಾರ್ಯಾಗಾರ ಮತ್ತು ರೋಟರಿ ಮತ್ತು ರೊಟರಾಕ್ಟ್ ಕ್ಲಬ್ ಪುತ್ತೂರು ಇದರ ವತಿಯಿಂದ ಅಂಗನವಾಡಿ ಪುಟಾಣಿಗಳಿಗೆ ಪಾದರಕ್ಷೆ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ರೊಟರಾಕ್ಟ್ ಕ್ಲಬ್ ಪುತ್ತೂರು ಇದರ ಸಭಾಪತಿ ರೋ.ಶ್ರೀದರ್ ಆಚಾರ್ಯ, ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರು ರೋ.ಸುಬ್ರಮಣಿ, ಮಾಜಿ ವಲಯ ಪ್ರತಿನಿಧಿ ನವೀನ್ ಚಂದ್ರ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಎಡ್ವರ್ಡ್, ರೋಟರಾಕ್ಟ್ ಸದಸ್ಯರಾದ ರೋ.ವಿನೀತ್, ರೋ.ನವನೀತ್, ರೋ.ಹರ್ಷಿತ್, ರೋ.ಬಾತೀಷ್, ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಎಂ. ತಾಲೂಕು ಆಶಾ ಮೆಂಟರ್ ಹರಿಣಿ ಬಿ.ಜಿ, ಸುಶ್ಮಿತಾ ಆಪ್ತ ಸಮಲೋಚಕರು, ಆಶಾ ಕಾರ್ಯಕರ್ತೆ ಪ್ರೀಯಾ ಮತ್ತು ಮಂಜುನಾಥ ಸ್ತ್ರಿಶಕ್ತಿ ಸ್ವಹಾಯ ಸಂಘದ ಸದಸ್ಯರಾದ ಕು.ಇಂದಿರಾ, ಸುಶೀಲ ಹಾಗೂ ಅಂಗನವಾಡಿ ಸಹಾಯಕಿ ಪ್ರೇಮ ಸಹಕರಿಸಿದ್ದರು. ಕು.ಲಹರಿ ಪ್ರಾರ್ಥಿಸಿ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರ ಹರೀಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು.