ಪುತ್ತೂರು ಜೋಸ್ ಆಲುಕ್ಕಾಸ್ ಜ್ಯುವೆಲ್ಲರ್ಸ್ ನಲ್ಲಿ 60ನೇ ವರ್ಷಾಚರಣೆ ಸಂಭ್ರಮಕ್ಕೆ ಚಾಲನೆ – ಸಿ.ಎಸ್.ಆರ್. ಫಂಡ್ ನ ಚೆಕ್ ವಿತರಣೆ

0

ಸಿಎಸ್ಆರ್ ಫಂಡ್ ನೀಡಲು‌ ವಿದ್ಯಾ ಕ್ಷೇತ್ರವನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ: ರೆ.ಫಾ.ವಿಜಯ ಹಾರ್ವಿನ್

ಸಂಸ್ಥೆಯ ಸಹಕಾರ ಗುಣ ಇತರರಿಗೆ ಮಾದರಿ‌: ಶ್ರೀಲತಾ

ಈ ಸಂಸ್ಥೆ ಇತರ ಸಂಸ್ಥೆಗಳಿಗಿಂತ ಬಿನ್ನವಾಗಿದೆ: ಮಾಲತಿ

ಪುತ್ತೂರು: ಇದೊಂದು ಸಂತಸ ಸಂಭ್ರಮದ ಕ್ಷಣವಾಗಿದೆ. ಸಂಸ್ಥೆ ಇದೀಗ 60ನೇ ವರ್ಷಾಚರಣೆ ನಡೆಸಬೇಕಾದರೆ ಹಲವಾರು ಏಳು, ಬೀಳನ್ನು ಕಂಡಿರಬೇಕಾಗಿದೆ. ಮಾಲಕರ, ಸಿಬ್ಬಂದಿಗಳ ಶ್ರಮ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಜನಸ್ನೇಹಿ ವ್ಯಾಪಾರ ಜೋಸ್ ಆಲುಕ್ಕಾಸ್ ನ ವೈಶಿಷ್ಟ್ಯ. ಗುಣಮಟ್ಟದ ವಸ್ತುಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಸಂಸ್ಥೆ ಇದಾಗಿದೆ. ಸಂಸ್ಥೆಯ ಜನಪರ ಕಾಳಜಿ ಅಭಿನಂದನೀಯ. ಸಿಎಸ್ಆರ್ ಫಂಡ್ ನ್ನು ನೀಡಲು‌ ವಿದ್ಯಾ ಕ್ಷೇತ್ರವನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಕ್ಕಿದಾಗ ನಮ್ಮ ದೇಶ ಬೆಳೆಯಲು ಸಾಧ್ಯ ಎಂದು ಸುಧಾನ ವಸತಿಯುತ ಶಾಲೆಯ ರೆ.ಫಾ.ವಿಜಯ ಹಾರ್ವಿನ್ ರವರು ಹೇಳಿದರು.

ಅವರು ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನ 60ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಚಾಲನೆ ನೀಡಿ, ಶಾಲೆಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ಸಿ.ಎಸ್.ಆರ್. ಫಂಡ್ ನಿಂದ ಕೊಡಮಾಡುವ ಮೊತ್ತದ ಚೆಕ್ ಅನ್ನು ವಿತರಣೆ ಮಾಡಿ ಮಾತನಾಡಿದರು.

ನರಿಮೊಗರು ಹಿ.ಪ್ರಾ. ಶಾಲಾ ಶಿಕ್ಷಕಿ ಶ್ರೀಲತಾ ರವರು ಮಾತನಾಡಿ ಸಿಎಸ್ಆರ್ ಫಂಡ್ ನ ಮೂಲಕ ಶಾಲಾ ಮಕ್ಕಳಿಗೆ ನೆರವಾಗುವ ಸಂಸ್ಥೆಯ ಯೋಚನೆ ಅಭಿನಂದನೀಯ. ಇದೊಂದು ಹೆಮ್ಮೆಯ ವಿಚಾರ. ಜೋಸ್ ಆಲುಕ್ಕಾಸ್ ಸಂಸ್ಥೆಯ ಸಹಕಾರ ಗುಣ ಇತರರಿಗೆ ಮಾದರಿ‌ ಎಂದರು.

ಕಲ್ಲಂಗಳ ಕೇಪು ಸರಕಾರಿ ಪ್ರೌಡ ಶಾಲಾ ಶಿಕ್ಷಕಿ ಮಾಲತಿರವರು ಮಾತನಾಡಿ ಸ್ವರ್ಣೋಧ್ಯಮ ಅಷ್ಟೊಂದು ಸುಲಭದ ವ್ಯಾಪಾರವಲ್ಲ‌. ಈ ಸಂಸ್ಥೆ ಇತರ ಸಂಸ್ಥೆಗಳಿಗಿಂತ ಬಿನ್ನವಾಗಿದೆ. ಎಲ್ಲಾ ವರ್ಗದ ಜನರನ್ನು ಒಂದಾಗಿ ಕಾಣುತ್ತಾ ಸಮಾನತೆಯಿಂದ ವ್ಯವಹರಿಸುತ್ತಾರೆ ಎಂದರು. ನಗರಸಭಾ ಸದಸ್ಯ ಶರೀಫ್ ಬಲ್ನಾಡು, ಉದ್ಯಮಿ, ಸಂಸ್ಥೆಯ ಗ್ರಾಹಕರಾದ ನಂದಕಿಶೋರ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿಗಳಾದ ಪ್ರತೀಕ್ಷಾ, ಹರ್ಷಿಕಾ, ರಶ್ಮಿತಾ, ಪ್ರಾರ್ಥಿಸಿದರು. ಸಂಸ್ಥೆಯ ಸಿಬ್ಬಂದಿ ರಮ್ಯ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ರತೀಶ್ ಸಿ.ಪಿ, ಸಹಾಯಕ ವ್ಯವಸ್ಥಾಪಕ ಲಿನೀಶ್, ಅಕೌಂಟ್ಸ್ ವಿಭಾಗದ ರಾಜೇಶ್ ಅತಿಥಿಗಳನ್ನು ಗೌರವಿಸಿದರು.

ನಾಲ್ಕು ಶಾಲೆಗೆ ಸಿಎಸ್ಆರ್ ಫಂಡ್ ಹಸ್ತಾಂತರ
ನರಿಮೊಗರು ಹಿ.ಪ್ರಾ ಶಾಲೆಗೆ ರೂ 1,02,251, ಬೆಳಿಯೂರು ಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ರೂ.46,000 , ಜಿ.ಹೆಚ್.ಪಿ.ಎಸ್. ವೀರಮಂಗಲ ಶಾಲೆಗೆ ರೂ.1,00,800, ಕಲ್ಲಂಗಳ ಕೇಪು ಸರಕಾರಿ ಪ್ರೌಡಶಾಲೆಗೆ ರೂ.1,14,499

60ನೇ ವರ್ಷಾಚರಣೆ ಪ್ರಯುಕ್ತ ಆರುವಾರಗಳಲ್ಲಿ ಆರು ಕಾರುಗೆಲ್ಲುವ ಅವಕಾಶ

ಸಂಸ್ಥೆ ತನ್ನ 60ನೇ ವರ್ಷಾಚರಣೆಯನ್ನು ಗ್ರಾಹಕರೊಂದಿಗೆ ಆಚರಿಸಲು ಈಗಾಗಲೇ ಸರ್ವ ಸನ್ನದ್ದವಾಗಿದ್ದು, ಆರು ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಘೋಷಣೆ ಮಾಡಿದೆ. ಈ ಸಂಭ್ರಮವು ಆರು ವಾರಗಳ ಕಾಲ ನಡೆಯಲಿದ್ದು, ಪ್ರತೀ ವಾರ ಒಂದೊಂದು ದ್ವಿಚಕ್ರ ವಾಹನ, ಗೃಹೋಪಯೋಗಿ ಉಪಕರಣಗಳನ್ನು ಗೆಲ್ಲಬಹುದಾಗಿದೆ. ಪ್ರತಿಯೊಂದೂ ಖರೀದಿಗೂ ಉಚಿತ ಉಡುಗೊರೆ ದೊರೆಯಲಿದೆ. ಪ್ಲಾಟಿನಂ ಮೇಲೆ 7% ರೀಯಾಯಿತಿ, ವಜ್ರಗಳ ಮೇಲೆ 20% ರೀಯಾಯಿತಿ. ಹೊಸ ವಜ್ರದ ಆಭರಣಗಳಿಗೆ ಎಕ್ಸ್ ಚೇಂಜ್ ಮಾಡುವಾಗ 100% ಮೌಲ್ಯವನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here