ಪುತ್ತೂರು: 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಿಸುವ ಹರ್ಷಕುಮಾರ್ ರೈ ಮಾಡಾವು ನಿರ್ಮಾಣದ ಭಾರತಾಂಬೆಯ ತೇರು ದೇಶಭಕ್ತಿಗೀತೆ ಬಿಡುಗಡೆ ಆ.15ರಂದು ನಡೆಯಲಿದೆ.
ಧರ್ಮದೈವ ಚಲನಚಿತ್ರದ ಹಿನ್ನೆಲೆ ಗಾಯಕಿ ಕು. ಸಮನ್ವಿ ಆರ್. ರೈ ನುಳಿಯಾಲು, ಪ್ರಾಪ್ತಿ ಶೆಟ್ಟಿ ಮಾರ್ನಾಡ್, ರವಿ ಪಾಂಬಾರ್ ಗಾಯನವಿದ್ದು ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಸುಧಾ ಎನ್.ರಾವ್ ಸಾಹಿತ್ಯವಿದೆ. ಕಲಾ ರತ್ನ ರವಿ ಪಾಂಬಾರ್ ಅವರ ಸಂಗೀತ ನಿರ್ದೇಶನವಿದೆ. ಸುಭಾಸ್ ಮಿಜಾರು ಪ್ರೋಗ್ರಾಮಿಂಗ್ನಲ್ಲಿ ಅಮಿತಾ ಸಂಜೀವ ಮಿತ್ತಳಿಕೆ, ಕಾವ್ಯಶ್ರೀ ಪ್ರವೀಣ್ ಅಳಿಕೆ, ಸೌಮ್ಯರಾಮ್ ಕಲ್ಲಡ್ಕ, ಅಕ್ಷತಾ ನಾಗನಕಜೆ, ಅನನ್ಯ ಕೌಡಿಚ್ಚಾರ್, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ನ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಇವರ ಸಹಕಾರದಲ್ಲಿ ಮಿಥುನ್ರಾಜ್ ವಿದ್ಯಾಪುರ ಮಿಕ್ಸಿಂಗ್ ಮತ್ತು ಸಂಕಲನದಲ್ಲಿ ಬಿಗ್ ಟ್ರೂ ಸ್ಟುಡಿಯೋ ಪ್ರಚಾರ ಕಲೆಯಲ್ಲಿ ಸಹಕರಿಸಿದ್ದಾರೆ.
ದೇಶ ಭಕ್ತಿ ಸಾರುವ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ ಸೇರಿದಂತೆ ಹಲವು ಕಿರುಚಿತ್ರ ನಿರ್ಮಿಸಿರುವ ಜನ್ಮ ಕ್ರೀಯೇಷನ್ಸ್ ಈ ಬಾರಿ ಸ್ವಾತಂತ್ರ ದಿನಾಚರಣೆಯ ಅಂಗವಾಗಿ`ಭಾರತಾಂಬೆಯ ತೇರು’ ಎನ್ನುವ ಭಕ್ತಿ ಗೀತೆ ಆಲ್ಬಂ ಸಾಂಗ್ ನಿರ್ಮಾಣ ಮಾಡಿ ಬಿಡುಗಡೆಗೊಳಿಸುತ್ತಿದೆ ಎಂದು ಜನ್ಮ ಕ್ರಿಯೇಷನ್ಸ್ನ ಪ್ರಕಟಣೆ ತಿಳಿಸಿದೆ.