ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

0

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಅವರು ಧ್ವಜಾರೋಹಣ ಗೈದರು.

ಶಾಲಾ ವಿದ್ಯಾರ್ಥಿ ನಾಯಕ ಡಿ. ಯನ್. ಜ್ಞಾನೇಶ್ ವಿದ್ಯಾರ್ಥಿ ಪ್ರತಿನಿಧಿಯಾಗಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ 30ವರ್ಷಗಳ ಸೇವೆ ಸಲ್ಲಿಸಿದ್ದ ನಿವೃತ್ತಸೇನಾಧಿಕಾರಿ ದಾಸಪ್ಪ ಪೂಜಾರಿ.ಯನ್, ಶಾಲಾ ಕಾರ್ಯದರ್ಶಿ ಮೋಹನ ಎ, ನಿರ್ದೇಶಕರಾದ ಹಸನ್ ವಿಟ್ಲ, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಪ್ರಾಂಶುಪಾಲರಾದ ಜಯರಾಮ್ ರೈ ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲಾ ಸಾಂಸ್ಕೃತಿಕ ವಿಭಾಗ “ಅಂಕುರ” ದ ವತಿಯಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು 7ನೇ ತರಗತಿಯ ತಾತ್ವಿಕ ಎನ್ ಕೆ, ಭುವಿ ಪಿ ನಿರೂಪಿಸಿದರು. ರಮಿತ್ ಮರುವಾಳ ಸ್ವಾಗತಿಸಿದರು. ಧನ್ವಿ ಮತ್ತು ಗ್ರೀಷ ಬಹುಮಾನ ಪಡೆದ ಮಕ್ಕಳ ಹೆಸರನ್ನು ಓದಿದರು. ಮಾನ್ಯ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಿಕ್ಷಕರಾದ ತುಳಸಿ, ಧನಲಕ್ಷ್ಮಿ ಹಾಗೂ ಭಾವನ ಸಹಕರಿಸಿದರು.

LEAVE A REPLY

Please enter your comment!
Please enter your name here