ಕುದ್ಮಾರು ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

0

ಕಾಣಿಯೂರು: ಕುದ್ಮಾರು ಸ.ಉ.ಹಿ ಪ್ರಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ ಅನ್ಯಾಡಿ ಇವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷದೊಂದಿಗೆ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಸಾಗಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಪಾರ್ವತಿ ಮರಕಡ ಇವರು ವಹಿಸಿದ್ದರು. ವೇದಿಕೆಯಲ್ಲಿ ದತ್ತಿನಿಧಿ ದಾನಿಗಳಾದ ಶೂರಪ್ಪ ಗೌಡ ಪಟ್ಟೆತ್ತಾನ, ಆನಂದ ಗೌಡ, ರಂಜಿತ್ ಮುದ್ಯಾ, ಶ್ರೀ ಮೇದಪ್ಪ ಗೌಡ ಕುವೆತ್ತೋಡಿ, ಶ್ರೀಮತಿ ರೇವತಿ ,ಎಸ್‌ ಡಿ ಎಂ ಸಿ ಅಧ್ಯಕ್ಷೆ ನವ್ಯ ಅನ್ಯಾಡಿ, ಶಾಲಾ ಮುಖ್ಯಗುರು ಕುಶಾಲಪ್ಪ ಬಿ, ಶಾಲಾ ನಾಯಕ ಮಹಮ್ಮದ್ ತಾಜುದ್ದೀನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥಿಸಿದರು. ಮುಖ್ಯ ಗುರು ಕುಶಾಲಪ್ಪರವರು ಸ್ವಾಗತಿಸಿದರು.

ಎಸ್ ಡಿ ಎಮ್ ಸಿ ಯ ಮಾಜಿ ಸದಸ್ಯರಾದ ಪ್ರಶಾಂತಿ, ಕವಿತಾ, ಅಬ್ದುಲ್ ಲತೀಫ್, ಪುರಂದರ ಗೌಡ, ಕುಸುಮ ಇವರುಗಳನ್ನು ಗೌರವಿಸಲಾಯಿತು. ಆನಂದ ಗೌಡ ಮತ್ತು ಪುಷ್ಪಾವತಿ ಆನಂದ ಗೌಡ ಬರೆಪ್ಪಾಡಿ, ಸತೀಶ್ ಕುಮಾರ್ ಕೆಡೆಂಜಿ, ವನಮಾಲ ಕಡಂಬ ಮತ್ತು ಮಕ್ಕಳು ಬರೆಪ್ಪಾಡಿ, ನರಸಿಂಹ ಪ್ರಸಾದ್ ಪಾಂಗಣ್ಣಾಯ ಮತ್ತು ಮಧುರಾ ಪ್ರಸಾದ್ ಪಾಂಗಣ್ಣಾಯ ಕುವೆತ್ತೋಡಿ , ರೇವತಿ ನಿವೃತ್ತ ದೈ. ಶಿ. ಶಿ. ಕಾಣಿಯೂರು, ಬೃಂದಾ ಮತ್ತು ರಕ್ಷಿತ್ ವಿ, ವಾಜಪೇಯಿ ಅಭಿಮಾನಿ ಬಳಗ, ಕುದ್ಮಾರು, ಶಾರದ ಮತ್ತು ಮನೆಯವರು ಖಂಡಿಗ, ಶೂರಪ್ಪ ಗೌಡ ಪಟ್ಟೆತ್ತಾನ, ನಿವೃತ್ತ ಜೆ.ಇ., ಬಿಎಸ್‌ಎನ್‌ಎಲ್, ಜುಲಿಯಾನ ಡಿಸೋಜ, ನಿವೃತ್ತ ಮುಖ್ಯ ಗುರುಗಳು, ಕುದ್ಮಾರು, ಸುರೇಶ್ ಕುಮಾರ್ ಪಿ.ಎಸ್., ನಿವೃತ್ತ ದೈ.ಶಿ.ಶಿಕ್ಷಕರು ಕುದ್ಮಾರು ಇವರುಗಳು ಕೊಡ ಮಾಡುವ ದತ್ತಿ ನಿಧಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಯೋಗೀಶ್ ಬರೆಪ್ಪಾಡಿ ಇವರು ನೀಡಿದ ಹೊಸ ದತ್ತಿ ನಿಧಿಯನ್ನು ಈ ಸಂದರ್ಭದಲ್ಲಿ ಮುಖ್ಯ ಗುರುಗಳಿಗೆ ಹಸ್ತಾಂತರಿಸಲಾಯಿತು.
ಇದರ ನಿರ್ವಹಣೆಯನ್ನು ಶಿಕ್ಷಕಿಯರಾದ ವೀಣಾ ಮತ್ತು ಪ್ರಿಯಾಂಕ ನೆರವೇರಿಸಿಕೊಟ್ಟರು. ಶಿಕ್ಷಕಿ ಸುಜಾತ ಇವರು ವಂದಿಸಿದರು. ಶಿಕ್ಷಕಿ ಶ್ರೀಲತಾರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ವೀರಾಡಿಸೋಜ, ಸುಕನ್ಯ, ಸೌಮ್ಯ, ಭವ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here