ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ‘ಆಟಿ ಮುಗಿತಲ ಲೇಸ್’ ಕಾರ್ಯಕ್ರಮ

0

ತುಳುನಾಡಿನ ಆಚಾರ ವಿಚಾರಗಳ ಅರಿವು ನಮ್ಮಲ್ಲಿರಲಿ: ಒಡಿಯೂರು ಶ್ರೀ

ವಿಟ್ಲ: ತುಳುನಾಡಿನ ಆಚಾರ ವಿಚಾರಗಳ ಅರಿವು ನಮ್ಮಲ್ಲಿರಬೇಕು. ಪ್ರಾಚೀನ ಪದ್ದತಿಗಳನ್ನ ಮುಂದುವರೆಸುವ ಪ್ರಯತ್ನ ನಮ್ಮದಾಗಲಿ.
ಹಿಂದಿನ ಕಾಲದಲ್ಲಿ ಆಟಿ ಬಡತನದ ತಿಂಗಳಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಹಿಂದಿ‌ನ ಆಹಾರ ಪದ್ದತಿಗಳಿಗೆ ಅದರದ್ದೇ ಆದ ಮಹತ್ವವಿದೆ. ನಮ್ಮ ಆಹಾರಗಳು ನಮಗೆ ಮದ್ದಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರ್ದ ತುಳುಕೂಟದ ಆಶ್ರಯದಲ್ಲಿ ಜರಗಿದ ‘ಆಟಿ ಮುಗಿತಲ ಲೇಸ್’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು‌.

ನಮ್ಮ ಪರಂಪರೆಯನ್ನು ಉಳಿಸುವ ಕೆಲಸವಾಗಬೇಕು. ತುಳು ವೈವಿದ್ಯಮಯ ಭಾಷೆಯಾಗಿದೆ. ತುಳುನಾಡಿಗೆ ಅದರದ್ದೇ ಆದ ಸ್ಥಾನಮಾನವಿದೆ. ತುಳುವಿಗೆ ಸ್ಥಾನಮಾನ ಸಿಗಬಹುದು ಎನ್ನುವ ವಿಶ್ವಾಸ ನಮ್ಮಲ್ಲಿ ಮತ್ತಷ್ಟು ಹೆಚ್ಚಾಗತೊಡಗಿದೆ‌. ಭಾಷೆ, ದೇಶ, ಸಂಸ್ಕೃತಿ ಸಂಸ್ಕಾರ ನಮ್ಮದೆನ್ನುವ ಪ್ರೀತಿ ಇರಬೇಕು. ತುಳುಭಾಷೆ ಬಹಳಷ್ಟು ವ್ಯಾಪಕವಾಗಿದೆ. ಹಿತಮಿತವಾದ ಆಹಾರ ಪದ್ದತಿ ನಮ್ಮದಾಗಬೇಕು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮಂಗಳೂರಿನ ಉದ್ಯಮಿ ಭರತ್ ಭೂಷಣ್, ಗೀತಾ ಭರತ್ ಭೂಷಣ್, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಲಾಭಾಂಶದ ಚೆಕ್ ವಿತರಣೆ ನಡೆಯಿತು.

ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ಮೇಲ್ವಿಚಾರಕಿ ಲೀಲಾ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here