ಕೊಂಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೊಂಬೆಟ್ಟು ಅಂಗನವಾಡಿ ಕೇಂದ್ರದಲ್ಲಿ 78ನೇ ಸ್ವಾತಂತ್ರ್ಯ ದಿನಾಚಣೆ ನಡೆಯಿತು. ಧ್ವಜಾರೋಹಣವನ್ನು ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್‌ ರಾವ್‌ ನೆರವೇರಿಸಿ, ಶುಭಹಾರೈಸಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಪ್ರೇಮಲತಾ ರಾವ್‌, ಸದಸ್ಯರಾದ ವತ್ಸಲಾ ರಾಜ್ಞಿ, ಬಾಲವಿಕಾಸ ಸಮಿತಿ ಅಧ್ಯಕ್ಷ, ಸದಸ್ಯರು, ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಜಯಲತ, ಆರೋಗ್ಯ ಸಹಾಯಕಿ ನಿಶಾ ಎಚ್‌, ಅಂಗನವಾಡಿ ಕಾರ್ಯಕರ್ತೆ ರೋಹಿಣಿ, ಯಶೋಧ, ವಸಂತಿ, ಗುಲಾಬಿ, ಜೀವಲಕ್ಷ್ಮೀ ಭಾಗವಹಿಸಿದರು. ರೋಟರ್ಯಾಕ್ಟ್‌ ಕ್ಲಬ್‌ ಪುತ್ತೂರು ವತಿಯಿಂದ ಪುಟಾಣಿಗಳಿಗೆ ಪಾದರಕ್ಷೆಗಳನ್ನು ವಿತರಿಸಲಾಯಿತು. ಕೊಂಬೆಟ್ಟು ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ ಸ್ವಾಗತಿಸಿ, ಧನ್ಯವಾದಗೈದರು. ಸಹಾಯಕಿ ಸ್ವರ್ಣಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here