ಅರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸವಣೂರು: ಇಲ್ಲಿನ ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಪಟ್ಟೆ ಇವರು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಕಾವ್ಯಶ್ರೀ ಪ್ರಶಸ್ತಿ ಪಡೆದ ಕವಯತ್ರಿ ಅಶ್ವಿನಿ ಕೋಡಿಬೈಲು ಇವರು ಆಗಮಿಸಿ ಸ್ವಾತಂತ್ರ್ಯದ ಮಹತ್ವ ಹಾಗೂ ಪ್ರಜೆಗಳ ಕರ್ತವ್ಯದ ಬಗ್ಗೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವುದರೊಂದಿಗೆ ಐಕ್ಯತಾ ಭಾವನೆ ದೇಶದಲ್ಲೆಲ್ಲಾ ಪಸರಿಸಲಿ ಎಂದು ಹಾರೈಸಿದರು.

ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ವಿ ಶೆಟ್ಟಿ ಕೆಡೆಂಜಿ ಹಾಗೂ ತೀರ್ಥರಾಮ ಕೆಡೆಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಕುದ್ಮನಮಜಲು ಇವರ ಗೌರವ ಉಪಸ್ಥಿತಿ ಇದ್ದರು. ತೀರ್ಥರಾಮ ಕೆಡೆಂಜಿ ಇವರು ಕೊಡಮಾಡಿದ ದತ್ತಿ ನಿಧಿಯಿಂದ ಬಂದ ಮೊತ್ತದಿಂದ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪ್ರಭಾತಪೇರಿ ಬಳಿಕ ಸಾರ್ವಜನಿಕರಿಗೆ ಪೆನ್ನು ಪೇಪರ್ ಬಳಸದೆ ರಾಷ್ಟ್ರಧ್ವಜ ತಯಾರಿಸುವ ಹಾಗೂ ಭಾರತದ ಭೂಪಟದಲ್ಲಿ ರಾಜ್ಯ ಗುರುತಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.


ಶಾಲಾ ಎಸ್ ಡಿ ಎಂಸಿ ಸದಸ್ಯರು, ಪೋಷಕರು, ಊರಿನವರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಮಕ್ಕಳಿಗೆ ಸಿಹಿ ತಿಂಡಿ ವ್ಯವಸ್ಥೆ ಮಾಡಿದ್ದರು. ಶಾಲಾ ಮುಖ್ಯ ಗುರು ಜಗನ್ನಾಥ ಎಸ್ ಸ್ವಾಗತಿಸಿದರು. ಶ್ರೀಕಾಂತ ನಾಯ್ಕ ಎಂ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಗೌರವ ಶಿಕ್ಷಕಿ ರಮ್ಯಾ ರೈ ಕೆ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here