ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣ ಅಂಗವಾಗಿ ಅಗೇಲು ಸೇವೆ

0

ಬಡಗನ್ನೂರು: ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿನಗರ ಸುಳ್ಯಪದವು ಇಲ್ಲಿ ಅ.16ರಂದು ಆಷಾಢ ಮಾಸ ಶುಭ ಸಂಕ್ರಮಣ ಅಂಗವಾಗಿ ಅಗೇಲು ಸೇವೆ ಹಾಗೂ ಶ್ರೀ ಗುಳಿಗ ದೈವಕ್ಕೆ ಕಳಸ ಸೇವೆ ನಡೆಯಿತು. ಭಕ್ತಾದಿಗಳಿಂದ ಸುಮಾರು 125 ಹರಕೆ ಅಗೆಲು ಸೇವೆ ಹಾಗೂ ಕಳಸ ಸೇವೆ ಸಲ್ಲಿಸಿ ಪ್ರಾರ್ಥಿಸಿದರು. ಭಕ್ತಾಧಿಗಳು ಅನ್ನಪ್ರಸಾದ ಭೋಜನ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಪ್ರಧಾನ ಪೂಜಾ ಕರ್ಮಿ ಮಾದವ ಸಾಲಿಯಾನ್ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here