ತರಗತಿ ಪಾಠವೊಂದೇ ಅಂತಿಮವಲ್ಲ, ಕಣ್ಣು ತೆರೆದು ಲೋಕ ಜ್ಞಾನ ಗಳಿಸೋಣ- ಸ್ವಾಮಿ ಮಹಾಮೇಧಾನಂದ
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ಬೆಟ್ಟಂಪಾಡಿ ಇಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆದು ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಂಗನಾಥ ರೈ ಗುತ್ತು ನೆರವೇರಿಸಿ, ಸ್ವಾತಂತ್ರ್ಯ ದಿನದ ಮಹತ್ವ, ಅದರ ಹಿಂದಿನ ಸಾಧನೆ, ವೀರಯೋಧರ ತ್ಯಾಗದ ಬಗ್ಗೆ ತಿಳಿಸಿದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮೈಸೂರು ಇದರ ಮುಖ್ಯಸ್ಥರಾಗಿರುವ ಸ್ವಾಮಿ ಮಹಾಮೇಧಾನಂದಜೀ ಇವರು ಮಾತನಾಡುತ್ತಾ ಕಲಿಕೆಯೊಂದೇ ಮುಖ್ಯವಲ್ಲ, ಕಣ್ಣು ತೆರೆದು ಲೋಕ ಜ್ಞಾನವನ್ನು ಗಳಿಸೋಣ. ಇತರರಿಗೂ ಮಾದರಿಯಾಗುತ್ತಾ ಜೀವನ ಸಾರ್ಥಕ್ಯಗೊಳಿಸೋಣ ಎಂದರು.
ಮುಖ್ಯ ಅತಿಥಿಗಳಾದ ರಿಟೈರ್ಡ್ ಸೀನಿಯರ್ ಜನರಲ್ ಮ್ಯಾನೇಜರ್ ಷ್ಯೆಯ್ಡರ್ ಎಲೆಕ್ಟ್ರಿಕ್ ಕಂಪನಿಯ ಸುಬ್ರಹ್ಮಣ್ಯ ಭಟ್ ಪೈರುಪುಣಿ ಎಲ್ಲರಿಗೂ ಶುಭಾಶಯ ಕೋರಿದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ *ವಿದ್ಯಾರ್ಥಿ ಗಾಗಿ ಪುಸ್ತಕ ಆಧಾರಿತ* ಈ ಪುಸ್ತಕದ ಕುರಿತು 10ನೇ ತರಗತಿ ವಿದ್ಯಾರ್ಥಿನಿ ಶರಣ್ಯ ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ಸಾನ್ವಿ ಪಿ. ಬಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಡಾ. ಸತೀಶ್ ರಾವ್, ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟಾವು, ಆಡಳಿತ ಮಂಡಳಿ ಸದಸ್ಯರಾದ ಅರವಿಂದ ಭಟ್ ದರ್ಬೆ ,ಉಪಸ್ಥಿತರಿದ್ದರು. ಭೋಜನ ವಿರಾಮದ ಬಳಿಕ ಸಾಂಸ್ಕೃತಿಕ ಪ್ರದರ್ಶನ ನಡೆಯಿತು .
ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿ, ಸಹ ಶಿಕ್ಷಕಿ ಪ್ರೀತಾ ವಂದಿಸಿದರು. ಸಹ ಶಿಕ್ಷಕಿ ಕುಮಾರಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.