ಉಪ್ಪಿನಂಗಡಿ : ಸಹೋದರ ಮತ್ತು ಸಹೋದರಿಯರ ಬಾಂಧವ್ಯದ ಮಹತ್ವವನ್ನು ತಿಳಿಸುವ ರಕ್ಷಾಬಂಧನ ಕಾರ್ಯಕ್ರಮವನ್ನು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಆಗಸ್ಟ್ 19ರಂದು ಆಚರಿಸಲಾಯಿತು.
ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಕೆದಿಲ ಹಾಗೂ ಶ್ರೀ ರಾಮ ವಿದ್ಯಾ ಸಂಸ್ಥೆ ಉಪ್ಪಿನಂಗಡಿಯ ಆಡಳಿತ ಮಂಡಳಿಯ ಸದಸ್ಯ ಜಯಂತ ಪುರೋಳಿ ರಕ್ಷಾ ಬಂಧನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಹಶಿಕ್ಷಕಿ ಭಾಗ್ಯಶ್ರೀ, 9ನೇ ತರಗತಿಯ ಆದ್ಯಾ ಹಾಗೂ ಸಿಂಚನಾ ಪ್ರೇರಣಾ ಗೀತೆಯನ್ನು ಹಾಡಿದರು.
ಐಕ್ಯತೆಯ ದ್ಯೋತಕವಾದ ರಕ್ಷೆಯನ್ನು ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಗೆ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ , ಶಿಕ್ಷಕ – ಶಿಕ್ಷಕೇತರ ವೃಂದವರು ಉಪಸ್ಥಿತರಿದ್ದರು.