ರಝಾನಗರ ಕಲಾಬಾಗಿಲು ಮಸ್ಜಿದ್ ಎ ಖಮರುಲ್ ಇಸ್ಲಾಂ ನೂತನ ಅಧ್ಯಕ್ಷರಾಗಿ ಶೇಕ್ ರಹ್ಮತುಲ್ಲಾಹ್ ಆಯ್ಕೆ

0

ಪುತ್ತೂರು: ಮಸ್ಜಿದ್ ಎ ಖಮರುಲ್ ಇಸ್ಲಾಂ ರಝಾನಗರ ಕಲಾಬಾಗಿಲು ಇದರ ನೂತನ ಅಧ್ಯಕ್ಷರಾಗಿ ಬುರೂಜ್ ಶಾಲಾ ಸಂಚಾಲಕ ಶೇಕ್ ರಹ್ಮತುಲ್ಲಾಹ್ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷ ಹಸನ್ ಸಾಹೇಬ್ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಶೇಕ್ ರಹ್ಮತುಲ್ಲಾಹ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಮೀಯ್ಯತುಲ್ ಫಲಾಹ್ ಬಂಟ್ವಾಳದ ಉಪಾಧ್ಯಕ್ಷ, ಮೀಫ್ ಸಂಸ್ಥೆ ಮಂಗಳೂರು ಇದರ ಕನ್ವೀನರ್,ಬಂಟ್ವಾಳ ಸಂಯುಕ್ತ ಜಮಾಅತ್ ಕಾರ್ಯದರ್ಶಿ,ರಾಜ್ಯ ಫಸ್ಟ್ ಕರ್ನಾಟಕ ಶಾಲಾ ಒಕ್ಕೂಟದ ಉಪಾಧ್ಯಕ್ಷ, ಬಂಟ್ವಾಳ ಕೃಷಿಕ ಸಮಾಜದ ಚುನಾಯಿತ ಸದಸ್ಯ, ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಉತ್ತಮ ಸಾಮಾಜಿಕವಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಇದೇ ವೇಳೆ ಗೌರವಾಧ್ಯಕ್ಷರಾಗಿ ಹಸನ್ ಸಾಹೇಬ್ ಕಲಾಬಾಗಿಲು ,ಉಪಾಧ್ಯಕ್ಷರಾಗಿ ಕರೀಮ್ ಸಾಹೇಬ್, ಕಾರ್ಯದರ್ಶಿಯಾಗಿ ನಯಾಝ್ ಶೇಕ್,ಉಪ ಕಾರ್ಯದರ್ಶಿಯಾಗಿ ಅಬ್ದುಲ್ಲಾ ರಝಾನಗರ, ಕೋಶಾಧಿಕಾರಿಯಾಗಿ ಅಬ್ದುಲ್ ಶುಕೂರ್, ಮತ್ತು ಸದಸ್ಯರಾಗಿ ಹಸನ್ ಸಾಹೇಬ್, ಅಬ್ದುಲ್ ಅಝೀಝ್ ಸೇವಾ, ಹಮೀದ್ ಪಿಕೆ, ನೂರುಲ್ಲಾ ಮೂಡಬಿದ್ರೆ, ರಶೀದ್ ನೇರಳಕಟ್ಟೆ, ಮಹಮೂದ್ ಸೇವಾ, ಶಬ್ಬೀರ್ ಪಂಜೋಡಿ, ಅಬ್ದುಲ್ ಗಫೂರ್ ರಝಾನಗರ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here