ವಿಟ್ಲ: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತುಶಕ್ತಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಮಯ 2024 ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ನೆರವೇರಿಸಿದರು. ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರಥ್ವಿರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯಾ ಪಿಂಟೊ ಉಪಸ್ಥಿತರಿದ್ದರು. ಶರಣಪ್ಪ ಸ್ವಾಗತಿಸಿದರು, ಭವ್ಯಶ್ರೀ ವಂದಿಸಿದರು. ಪೂರ್ಣೇಶ್ ಚಿತ್ರಕಲಾ ಅಧ್ಯಾಪಕರು ಕಾರ್ಯಕ್ರಮದ ಸಂಯೋಜಕರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ವಿಜೇತ ಅಭ್ಯರ್ಥಿಗಳು:
ಚಿತ್ರಕಲೆ ಪ್ರಥಮ ಸ್ಥಾನವನ್ನು ಅಗಮ್ಯ ವಿವೇಕಾನಂದಕನ್ನಡ ಮಾಧ್ಯಮ ಶಾಲೆ ಪುತ್ತೂರು, ದ್ವಿತೀಯ ಸ್ಥಾನವನ್ನು ಅನ್ವಿತ್ ಹರೀಶ್ ಕೆನರಾಶಾಲೆ ಉರ್ವಾ,ತೃತೀಯ ಸ್ಥಾನವನ್ನು ಅವನಿ ಬೆಳ್ಳಾರೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಕುಣಿತ ಭಜನೆಯಲ್ಲಿ ಪ್ರಥಮ ಸ್ಥಾನವನ್ನು ಚಿನ್ಮಯಿ ಮತ್ತು ತಂಡ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲು, ದ್ವಿತೀಯ ಸ್ಥಾನವನ್ನು ಅಪೇಕ್ಷ ಮತ್ತು ತಂಡ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ತೃತೀಯ ಸ್ಥಾನವನ್ನು ಸ್ಪಂದನ ಮತ್ತು ತಂಡ ಕುವೆಂಪು ಶಾಲೆ, ಶಕ್ತಿನಗರ, ಮುದ್ದುಕೃಷ್ಣದಲ್ಲಿ ಪ್ರಥಮ ಸ್ಥಾನವನ್ನು ಕೈರಾಗಿರೀಶ್ ಶೆಣೈ, ದ್ವಿತೀಯ ಸ್ಥಾನವನ್ನು ನೇಹಲ್ ಎಂ. ರಾವ್, ತೃತೀಯ ಸ್ಥಾನವನ್ನು ಲಕ್ಷ್ಯರಾವ್, ಬೆಣ್ಣೆ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಅವೀಶ್ ಎಸ್. ಶೆಟ್ಟಿ, ದ್ವಿತೀಯ ಸ್ಥಾನವನ್ನು ಗಾನ್ವಿ, ತೃತೀಯ ಸ್ಥಾನವನ್ನು ದೀತ್ಯಾ. ಯಶೋದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸಾನ್ವಿ ಮತ್ತು ಚಿತ್ರಾಕ್ಷಿ, ದ್ವಿತೀಯ ಸ್ಥಾನವನ್ನು ನೆಹಾಲಿ ಮತ್ತು ವಿದ್ಯಾ, ತೃತೀಯ ಸ್ಥಾನವನ್ನು ಶೌರ್ಯ ಮತ್ತು ಆಧಿತಿ ಪಡೆದಿರುತ್ತಾರೆ.
ಗೋಪಿಕಾ ಕೃಷ್ಣ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಮೋಕ್ಷ ಮತ್ತು ತಂಡ ಶಾರದಾ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ಹರ್ಷಿತಾ ಮತ್ತುತಂಡ ರಾಜ್‌ಅಕಾಡೆಮಿ, ತೃತೀಯ ಸ್ಥಾನವನ್ನು ಸೂರಜ್ ಮತ್ತು ತಂಡ ಟಿಸಿಐಎಫ್ ಕೇಂಬ್ರಿಡ್ಜ್ ಶಾಲೆ, ದಾಸರಕೀರ್ತನೆಯಲ್ಲಿ ಪ್ರಥಮ ಸ್ಥಾನವನ್ನು ದಿಯಾ ಕೋಟ್ಯಾನ್ ಮತ್ತು ತಂಡ ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಶಾಲೆ, ದ್ವಿತೀಯ ಸ್ಥಾನವನ್ನು ರಾಶಿ ಮತ್ತುತಂಡ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಆಶ್ರಿತ್ ಶೆಟ್ಟಿ ಮತ್ತುತಂಡರಾಜ್ ಅಕಾಡೆಮಿ,ಗೀತಾ ಕಂಠಪಾಠ (1ನೇ ತರಗತಿಯಿಂದ 5ನೇ ತರಗತಿ) ಪ್ರಥಮ ಸ್ಥಾನವನ್ನು ದಿವ್ಯಾಭಟ್ ಶಾರದಾ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ಪ್ರೇರಣಾ ಪ್ರಶಾಂತ್ ಶರ್ಮ ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಅಮೋದ್ ಶಾಸ್ತ್ರಿ ಕೆನರಾ ಶಾಲೆ ಉರ್ವ ಇವರು ಪಡೆದಿರುತ್ತಾರೆ. ಗೀತಾಕಂಠಪಾಠ (6ನೇ ತರಗತಿಯಿಂದ 7ನೇ ತರಗತಿ ವರೆಗೆ) ಪ್ರಥಮ ಸ್ಥಾನವನ್ನು ಪ್ರಕೃತಿ ಶರ್ಮ, ಶಾರದಾ ವಿದ್ಯಾನಿಲಯ, ದ್ವಿತೀಯ ಸ್ಥಾನವನ್ನು ಮುಕುಂದ್ ಎಸ್ ವಿವೇಕಾನಂದ ಶಾಲೆ ಪುತ್ತೂರು, ತೃತೀಯ ಸ್ಥಾನವನ್ನುಚೇತನ್‌ರಾವ್ ಶಾರದಾ ವಿದ್ಯಾನಿಲಯ ಪಡೆದಿರುತ್ತಾರೆ. ಗೀತಾಕಂಠಪಾಠ (8ನೇ ತರಗತಿಯಿಂದ 10ನೇತರಗತಿ ವರೆಗೆ) ಪ್ರಥಮ ಸ್ಥಾನವನ್ನು ಸಮುದ್ಯತ, ಅಮೃತ ವಿದ್ಯಾಲಯ, ದ್ವಿತೀಯ ಸ್ಥಾನವನ್ನು ತನ್ವಿ ಬಿ. ಶಾರದಾ ವಿದ್ಯಾಲಯ, ತೃತೀಯ ಸ್ಥಾನವನ್ನು ಶ್ರೀಶಾ ನಿಡ್ವಾಣಯ ವಿವೇಕಾನಂದ ಶಾಲೆ ಪುತ್ತೂರು ಇವರು ಪಡೆದಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಮತ್ತು ಫಲಕವನ್ನು ನೀಡಿಗೌರವಿಸಲಾಯಿತು. ಒಟ್ಟು 15 ಶಾಲೆಗಳ 150 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ದೆಯಲ್ಲಿ ಭಾಗವಹಿಸಿದರು.