ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಬಹುಮಾನ

0

ಪುತ್ತೂರು: ಬೆಂಗಳೂರಿನಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೆಂದ್ರದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ವಿವಿಧ ಈಜು ಸ್ಪರ್ಧೆಗಳಲ್ಲಿ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಸಿ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರತ್ಯುಶ್ ಎಲ್ ಗೌಡ 14 ವಯೋಮಾನದ 50ಮೀ ಬಟರ್ಫ್ಲೈ ಯಲ್ಲಿ ದ್ವಿತೀಯ, 50ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ, ಹಾಗೂ 4×100 ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಹಕ್ ರವಿ ಕುಮಾರ್ ಕೊಟಾರಿ 14ರ ವಯೋಮಾನದ 100ಮೀ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ದ್ವಿತೀಯ 4×100 ರಿಲೇಯಲ್ಲಿ ದ್ವಿತೀಯ, 17 ರ ವಯೋಮಿತಿ ವಿಭಾಗದಲ್ಲಿ ವರ್ದಿನ್ ಡಿ ರೈ 50ಮೀ ಹಾಗೂ 100ಮೀ ಬ್ರೆಸ್ಟ್ರೋಕ್, 50ಮೀ ಫ್ಲೈಯಲ್ಲಿ ಪ್ರಥಮ 4×100 ರಿಲೇ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. 14ರ ವಯೋಮಿತಿಯ ಚೆಸ್ ಸ್ಪರ್ಧೆಯಲ್ಲಿ ಇಂಚರ ಮಯ್ಯ ವಿಭಾಗೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ .

LEAVE A REPLY

Please enter your comment!
Please enter your name here