ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ಗೆ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಮನ್ಮಥರವರು ಆಗಮಿಸಿದ್ದು ಆ.22 ರಂದು ಅಧಿಕಾರ ವಹಿಸಿಕೊಂಡರು. ಇವರನ್ನು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಶಾಲು ಹಾಕಿ, ಹೂ ಗುಚ್ಛ ನೀಡಿ ಸ್ವಾಗತಿಸಿದರು. ಇದುವರೇಗೆ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಮಿತಾ ಎ.ಕೆಯವರಿಗೆ ಶಾಲು,ಹೂಗುಚ್ಛ, ಸ್ಮರಣಿಕೆ ಕೊಟ್ಟು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಮಿತಾ ಎ.ಕೆಯವರು ನನಗೆ ಇದುವರೇಗೆ ಕರ್ತವ್ಯ ನಿರ್ವಹಿಸಲು ಸಹಕಾರ ಕೊಟ್ಟು ಗ್ರಾಪಂ ಆಡಳಿತ ಮಂಡಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಮತ್ತು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಭಿವೃದ್ಧಿ ಅಧಿಕಾರಿ ಮನ್ಮಥರವರು ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡುವಂತೆ ಕೇಳಿಕೊಂಡರು. ಮನ್ಮಥರವರು ಸವಣೂರು ಗ್ರಾಪಂನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ ಗ್ರೇಡ್ 1 ಹುದ್ದೆಗೆ ಭಡ್ತಿ ಹೊಂದಿ ಇದೀಗ ಒಳಮೊಗ್ರು ಗ್ರಾಪಂಗೆ ಪಿಡಿಒ ಆಗಿ ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಜಯಂತಿ, ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ ಮುಡಾಲ, ವಿನೋದ್ ಶೆಟ್ಟಿ ಮುಡಾಲ, ಲತೀಪ್ ಟೈಲರ್, ಪ್ರದೀಪ್ ದರ್ಬೆತ್ತಡ್ಕ, ಶಾರದಾ, ಚಿತ್ರಾ, ಸುಂದರಿ, ರೇಖಾ, ವನಿತಾ, ನಿಮಿತಾ ರೈ, ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಮೋಹನ್ ಕೆ.ಪಿ, ಲೋಕನಾಥ ಉಪಸ್ಥಿತರಿದ್ದರು. ಒಳಮೊಗ್ರು ಗ್ರಾಪಂನಲ್ಲಿ ಖಾಯಂ ಪಿಡಿಒ ಇಲ್ಲದೇ ಇದ್ದುದರಿಂದ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೇ ಸದಸ್ಯರುಗಳು ಹಲವು ಸಲ ತಾಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿಕೊಂಡಿದ್ದರು.