ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಆ.22ರಂದು ರೋಟರಿ ಮನಿಷಾ ಹಾಲ್ ನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಂಗಾರ ಸ್ಟುಡಿಯೋ ಪುರುಷರಕಟ್ಟೆ ಇದರ ಮಾಲಕ ರವೀಶ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ರವೀಶ್ ಆಚಾರ್ಯರವರು ತನ್ನ ಛಾಯಾಗ್ರಹಣದ ವೃತ್ತಿಯ ಕುರಿತು ಹಾಗೂ ದಿನದಿಂದ ದಿನಕ್ಕೆ ನವೀಕರಣಗೊಳ್ಳುತ್ತಿರುವ ಛಾಯಾಗ್ರಹಣ ಉದ್ಯಮದ ಕುರಿತು ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷರಾದ ಸುರೇಶ್ ಪಿ. ಮಾತನಾಡಿ, ರವೀಶ್ ಆಚಾರ್ಯ ಇವರು ಓರ್ವ ಕಲಾತ್ಮಕ ಛಾಯಾಗ್ರಹಕರಾಗಿದ್ದು ಇವರು ತೆಗೆದಿರುವ ಛಾಯಾಚಿತ್ರ ಮನಮೋಹಕವಾಗಿದೆ. ಇವರ ವೃತ್ತಿ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ಛಾಯಾಗ್ರಾಹಕರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದರು. ಸದಸ್ಯ ಉಮೇಶ್ ಎಂ ಸ್ವಾಗತಿಸಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಂದರ ರೈ ಬಲ್ಕಾಡಿ ವಂದಿಸಿದರು. ಕಾರ್ಯದರ್ಶಿ ಸೆನೋರೀಟಾ ಆನಂದ್ ವರದಿ ಮಂಡಿಸಿದರು. ಇವರು ಮಂಡಿಸಿದರು. ಸಭೆಯಲ್ಲಿ ಮೀನಾಕ್ಷಿ ಹಾಗೂ ಸನತ್ ಕುಮಾರ್ ರೈ ಇವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಎಲ್ಲಾ ಸದಸ್ಯರು ಹಾಜರಿದ್ದರು.