ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ವತಿಯಿಂದ ಸ.ಹಿ.ಪ್ರಾ.ಶಾಲೆ ಇರ್ದೆ ಇಲ್ಲಿ ಆಯೋಜಿಸಿದ್ದ ಪುತ್ತೂರು ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಾಪೆಮಜಲು ಇಲ್ಲಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಉಮಾ ನಾಯಕ್ ಇವರಿಂದ ತರಬೇತಿ ಪಡೆದ ತಂಡವು , ಪ್ರಸಕ್ತ ಸಾಲಿನಲ್ಲಿ ಪಾಪೆ ಮಜಲು ಸರಕಾರಿ ಪ್ರೌಢಶಾಲೆಯ ಪ್ರವೀಣ ರೈ ಇವರ ತರಬೇತಿ ಮತ್ತು ಮಾರ್ಗದರ್ಶನದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಕೆ.ವಿ. ಲಾಸ್ಯ ( ನಾಯಕಿ), ಶಿಫಾಲಿ, ಸಿಂಚನ, ಖುಷಿ, ಚೈತನ್ಯ, ಯಶಸ್ವಿನಿ, ಹರ್ಷಿನಿ ಈ ತಂಡದಲ್ಲಿದ್ದು, ಕೆ. ವಿ ಲಾಸ್ಯ ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ನಡೆದ ಚೆಸ್ ಪಂದ್ಯಾವಳಿಯಲ್ಲಿ ಕೆ. ವಿ ಲಾಸ್ಯ ಇವರು ತಮ್ಮ ಶಾಲೆಯನ್ನು ಜಿಲ್ಲಾ ಮಟ್ಟದಲ್ಲಿಯೂ ಪ್ರತಿನಿಧಿಸಿದ್ದರು. ವಿದ್ಯಾರ್ಥಿನಿಯರ ಸಾಧನೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಎಂ. ಹಾಗೂ ಎಸ್ ಡಿ ಎಂಸಿ ಅಧ್ಯಕ್ಷ ದಿನೇಶ್ ಕುಮಾರ್ ಮರತಮೂಲೆ ಮತ್ತು ಶಿಕ್ಷಕಿಯರ ವೃಂದ ಅಭಿನಂದಿಸಿ ಶುಭಹಾರೈಸಿದ್ದಾರೆ.