ಪುತ್ತೂರು: ಉಪ್ಪಿನಂಗಡಿ ಕೆಮ್ಮಾರದಲ್ಲಿ ಸೆ.8ರಂದು ನಡೆಯುವ ಗಣೇಶೋತ್ಸವ ಹಾಗೂ ಸಾರ್ವಜನಿಕ ಆಟೋಟ ಸ್ಪರ್ಧೆಗಳ ಪ್ರಯುಕ್ತ ಶ್ರೀಗಣೇಶ ಕಟ್ಟೆ ಪೂಜಾ ಸಮಿತಿ ವತಿಯಿಂದ ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಶ್ರಮದಾನ, ಸ್ವಚ್ಛತಾ ಕಾರ್ಯ ಹಾಗೂ ಕಿರು ಆಣೆಕಟ್ಟುವಿನಲ್ಲಿ ತುಂಬಿದ್ದ ಕಸಕಡ್ಡಿ ಮರ, ಇತರ ತ್ಯಾಜ್ಯಗಳ ವಿಲೇವಾರಿ ನಡೆಯಿತು. ಬಳಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಾಡಲಾಯಿತು.
ಗಣೇಶ ಕಟ್ಟೆ ಪೂಜಾ ಸಮಿತಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಬಡಿಲ, ಕಾರ್ಯದರ್ಶಿ ಸುಧಾಕೃಷ್ಣ ನೆಕ್ಕರಾಜೆ, ಪದಾಧಿಕಾರಿಗಳು ಮತ್ತು ಸದಸ್ಯರಾದ ಹರಿಶ್ಚಂದ್ರ ನೆಕ್ಕರಾಜೆ, ಯಶವಂತ್ ಜಿ. ಗುಂಡ್ಯ, ಹರಿಕೃಷ್ಣ ಪಿ.ಎನ್. ನೆಕ್ಕರಾಜೆ, ಆಶಾ ಹರಿಕೃಷ್ಣ ನೆಕ್ಕರಾಜೆ, ರಮೇಶ್ ಪಿಳ್ಳೆಂಕಿ, ಸುರೇಶ ಪಿಳ್ಳೆಂಕಿ, ಪುಷ್ಪಕರ ಒಡ್ಡಾಜೆ, ಹೇಮಂತ್ ಮೈತಳಿಕೆ, ಚಿದಾನಂದ ಮೈತಳಿಕೆ, ನವೀನ್ ಚಂದ್ರ ಪಿ. ಎನ್., ಮೋಹನ್ ಚಂದ್ರ ಪಿ.ಎನ್, ಉಮೇಶ್ ನೆಕ್ಕರಾಜೆ, ರಮೇಶ್ ನೆಕ್ಕರಾಜೆ, ರಮೇಶ್ ಮಜಿಕುಡೆಲು, ಗುರುರಾಜ್ ಪಿಳ್ಳೆಂಕಿ, ಅಜಿತ್ ನೆಕ್ಕರಾಜೆ, ರಾಕೇಶ್ ಬೆರ್ಕೆಜಾಲು, ರಂಜಿತ್ ಶೆಟ್ಟಿ ಗುತ್ತು, ಶಶಿಧರ್ ಪೊಟ್ಟೆಜಾಲು, ಸುಭಾಷ್ ನೆಕ್ಕರಾಜೆ, ಚಿರಾಯು ನೆಕ್ಕರಾಜೆ, ವಸಂತ ಕೋಟಿಯನ್, ವಾಮನ ಬರೆಮೇಲುರವರು ಭಾಗವಹಿಸಿದರು. ಬೆಳಗ್ಗಿನ ಉಪಹಾರ ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ವಸಂತ ಕೋಟ್ಯಾನ್ ಹಾಗೂ ಹೇಮಂತ್ ಮೈತಳಿಕೆ ಸಹಕರಿಸಿದರು.