ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

0

ಪುಣಚ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಸಮಿತಿ ಪುಣಚ ಇವರ ಆಶ್ರಯದಲ್ಲಿ ನಡೆಯುವ 22ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.26ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ಎದುರುಗದ್ದೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವಿ ಸನ್ನಿಧಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಿಂದ ಪ್ರಾರ್ಥನೆ ನಡೆದು ತೆಂಗಿನಕಾಯಿ ಒಡೆಯವುದರೊಂದಿಗೆ ಚಾಲನೆ ನೀಡಿದರು. ಬಳಿಕ ಸಾಯಂಕಾಲದವರೆಗೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ಆರಂಭಗೊಂಡು, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ಸಾಯಂಕಾಲ ನಡೆದ ಸಭಾ ಕಾರ್ಯಕ್ರಮದಲ್ಲಿ ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಣೆ ಸಮಿತಿಯ ಗೌರವಾಧ್ಯಕ್ಷ ಎಸ್.ಆರ್.ರಂಗಮೂರ್ತಿ, ಪ್ರಗತಿಪರ ಕೃಷಿಕ ಮುರಳೀಧರ ರೈ ಬೈಲುದೇವಸ್ಯ, ನಿವೃತ್ತ ಶಿಕ್ಷಕ ಬಾಬು ನಾಯ್ಕ ಅಜ್ಜಿನಡ್ಕ, ಧ.ಗ್ರಾ.ಯೋಜನೆ ಅಳಿಕೆ ವಲಯದ ಮೇಲ್ವಿಚಾರಕಿ ಮಾಲತಿ ಸಂದೋರ್ಬೊಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಚರಣೆ ಸಮಿತಿ ಅಧ್ಯಕ್ಷ ಪದ್ಮನಾಭ ನಾಯ್ಕ ಕೆಲ್ಲಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ; ಕೃಷಿಯಲ್ಲಿ ನಿಷ್ಠಾವಂತ ಕೂಲಿ ಕಾರ್ಯ ನಿರ್ವಹಿಸಿದ ವೆಂಕಪ್ಪ ನಾಯ್ಕ ಕೆಲ್ಲಾಳಿ ಹಾಗೂ ಬಾಲ್ಯದಿಂದಲೇ ಚಿತ್ರಕಲೆ, ಚುಕ್ಕೆ ಚಿತ್ರಗಾರ್ತಿ, ಬಹುಮುಖಿ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಉಜಿರೆ ಕದಿರುದ್ಯಾವರ ಎರ್ಮಾಳ್’ಪಲ್ಕೆ ಕು.ಪವಿತ್ರ ರವರನ್ನು ಸಮಿತಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವಿಶೇಷ ಆಕರ್ಷಣೆಯಾಗಿ ಶ್ರೀಕೃಷ್ಣವೇಷ ಧರಿಸಿದ ಪುಟಾಣಿಗಳ ಜೊತೆ ಮಹಮ್ಮಾಯಿ ಕುಣಿತ ಭಜನಾ ತಂಡ ಹಾಗೂ ಸಿಂಗಾರಿ ಮೇಳದ ಚೆಂಡೆವಾದನದೊಂದಿಗೆ ದೇವಸ್ಥಾನದ ಸುತ್ತ ಸಂಚಲನ ನಡೆಯಿತು. ಶ್ರೀಕೃಷ್ಣ ವೇಷ ಧರಿಸಿದ ಎಲ್ಲಾ ಪುಟಾಣಿಗಳಿಗೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಅಶ್ವಿನಿ ಕೆ. ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ರೇಷ್ಮಾ ಸನ್ಮಾನಿತರ ಪಟ್ಟಿ ವಾಚಿಸಿದರು.

ಸಮಿತಿಯ ಸಂಚಾಲಕ ನಾರಾಯಣ ಬನ್ನಿಂತಾಯ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಎಸ್. ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here