ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳ ಆಶ್ರಯದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆ

0

ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜಿಸಿದ ನೂರಾರು ಪುಟಾಣಿಗಳು …

ವಿಜೇತ ಪುಟಾಣಿಗಳಿಗೆ ನಗದು-ಫಲಕ ಬಹುಮಾನ ಕೊಡುಗೆ…

ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳ ಕಿಡ್ಸ್ ಪ್ಲೇ ಹೋಂ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ -2024 ಕಾರ್ಯಕ್ರಮ ತುಂಬಾನೇ ಅದ್ಧೂರಿಯಿಂದ ನಡೆಯಿತು. ಪ್ರಗತಿಪರ ಕೃಷಿಕ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ಶಿಕ್ಷಕಿ ಹಾಗೂ ಲಯನ್ಸ್ ಸದಸ್ಯೆ ಮೀನಾಕ್ಷಿ ರಾಮಚಂದ್ರ ಹಾಗೂ ಟಿ.ವಿ.ನಿರೂಪಕಿ ಹೇಮಾ ಜಯರಾಮ್ ಮತ್ತು ಉಪನ್ಯಾಸಕಿ ಶ್ರೀಮತಿ ಕವಿತಾ ರೈ ಸಹಕರಿಸಿದರು. ವೇದಿಕೆಯಲ್ಲಿ ನಂದಗೋಕುಲದ ಚಿಣ್ಣರ ಅಂಗಳದ ವ್ಯವಸ್ಥಾಪಕಿ ಶ್ರೀಮತಿ ಪವಿತ್ರ ವಸಂತ ಆಚಾರ್ಯ ಉಪಸ್ಥಿತರಿದ್ದರು. ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ, ಅತಿಥಿಗಳನ್ನು ಹಾಗೂ ತೀರ್ಪುಗಾರರನ್ನು ಸ್ಮರಣಿಕೆ ನೀಡಿ ಗೌರವಿಸಿದರು.

ಸ್ಪರ್ಧಾ ಕಾರ್ಯಕ್ರಮದಲ್ಲಿ ನೂರಾರು ಪುಟಾಣಿಗಳು ಕೃಷ್ಣ ವೇಷಧಾರಿಗಳಾಗಿ ಭಾಗವಹಿಸಿ ಸಂಭ್ರಮಿಸಿದರು. 6 ತಿಂಗಳಿನಿಂದ 2.5 ವರ್ಷದ ಮಕ್ಕಳ ವಿಭಾಗದಲ್ಲಿ ದಿತ್ಯ ಕೆ ರೈ ಪ್ರಥಮ, ನಂದನ್ ಸೂರ್ಯ ದ್ವಿತೀಯ, ಲಿತೀಕ್ಷಾ ತೃತೀಯ ಹಾಗೂ 2.5 ವರ್ಷದಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಅದ್ವಿತಿ ಸಿಂಗ್ ಪ್ರಥಮ, ಅನಿಕಾ ಕೆ ಆಚಾರ್ಯ ದ್ವಿತೀಯ, ಪ್ರಾನ್ಸಿ ಬಿ ರೈ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತ ಪುಟಾಣಿಗಳಿಗೆ ನಗದು ಬಹುಮಾನ, ಪದಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಮತ್ತು ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಧನ್ಯವಾದ ಸಮರ್ಪಿಸಿದರು. ಅಕಾಡೆಮಿಯ ತರಬೇತುದಾರ ಚೇತನ ಸತೀಶ್ ನಿರೂಪಿಸಿದರು. ಅಕಾಡೆಮಿಯ ಸಿಬ್ಬಂದಿ ವರ್ಗದವರು ಮತ್ತು ಸಶಸ್ತ್ರ ಪಡೆಗಳ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಹಾಜರಿದ್ದರು.

LEAVE A REPLY

Please enter your comment!
Please enter your name here