ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ನಿವಾಸಿ ಬಾಲಪ್ಪ ಗೌಡ (67ವ) ಅನಾರೋಗ್ಯದಿಂದ ಆ.27ರಂದು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು, ಪತ್ನಿ ಜಯಶ್ರಿ, ಪುತ್ರಿ ಲಾವಣ್ಯ, ಪುತ್ರ ಚಿಂತನ್ ಹಾಗೂ ಸಹೋದರರಾಗಿರುವ ಗಂಗಾಧರ ಗೌಡ, ವಿಶ್ವನಾಥ ಗೌಡ ಮತ್ತು ಕಿಶೋರ್, ಸಹೋದರಿಯರಾದ ಲಲಿತ, ಪದ್ಮಾವತಿ ಮತ್ತು ವೀಣಾ ಅವರನ್ನು ಅಗಲಿದ್ದಾರೆ.
ಇವರು, ಬೆಳ್ಳಿಪ್ಪಾಡಿ ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರಾಗಿ, ಸುಬ್ರಹ್ಮಣ್ಯ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ಹಾಗೂ ಮುಳುವೇಲು ಜತ್ತಿಬೆಟ್ಟು ನಾಗಸನ್ನಿಧಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.