Video: ಬನ್ನೂರು ಕರ್ಮಲ ಬಳಿ ವೇಶ್ಯಾವಾಟಿಕೆ ಆರೋಪ-ಪೊಲೀಸರಿಂದ ವಿಚಾರಣೆ

0

ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಪೊಲೀಸ್ ವಸತಿ ಗೃಹದ ರಸ್ತೆಯ ಬಳಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯೊಂದರ ಪರಿಶೀಲನೆ ನಡೆಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಚಾರಣೆಗಾಗಿ ಕರೆದೊಯ್ದ ಘಟನೆ ಆ.29ರ ಸಂಜೆ ನಡೆದಿದೆ.

ಬನ್ನೂರು ಕರ್ಮಲ ಪೊಲೀಸ್ ವಸತಿಗೃಹ ರಸ್ತೆಯ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಪೊಲೀಸರು ಆಗಮಿಸಿದರು. ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಓರ್ವ ಮೈಸೂರು ಮೂಲದ ಯುವತಿ ಮತ್ತು ಮಹಿಳೆ ಇದ್ದು ಅವರನ್ನು ಪೊಲೀಸರು ಆಟೋ ರಿಕ್ಷಾವೊಂದರಲ್ಲಿ ಠಾಣೆಗೆ ಕರೆದೊಯ್ದರು. ಮೈಸೂರು ಮೂಲದ ಯುವತಿ ತನ್ನ ಸ್ನೇಹಿತೆ ಮನೆಗೆ ಬಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಹಿಳೆ ತಿಳಿಸಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here